ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕುಗಳ ಒಕ್ಕೂಟಕ್ಕೆ ₹4,736 ಕೋಟಿ ವಂಚನೆ ಆರೋಪದಡಿ ಹೈದರಾಬಾದ್ ಮೂಲದ ಕೋಸ್ಟಲ್ ಪ್ರಾಜೆಕ್ಟ್ ಲಿಮಿಟೆಡ್ ಮತ್ತು ಅದರ ನಿರ್ದೆಶಕರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.

ಸದ್ಯ, ಎಫ್‌ಐಆರ್‌ನ ಭಾಗವಾಗಿರುವ ಎಸ್‌ಬಿಐ ನೀಡಿರುವ ದೂರಿನಲ್ಲಿ, ಆರೋಪ ಹೊತ್ತಿರುವ ನಿರ್ಮಾಣ ಸಂಸ್ಥೆಯು 2013 ಮತ್ತು 2018 ರ ನಡುವಿನ ಐದು ವರ್ಷಗಳ ಅವಧಿಯಲ್ಲಿ, ಅವಾಸ್ತವಿಕ ಬ್ಯಾಂಕ್ ಖಾತರಿ ಮೊತ್ತವನ್ನು ನೈಜ ಹೂಡಿಕೆಯೆಂದು ತೋರಿಸಲು ಸುಳ್ಳು ಖಾತೆ ಪುಸ್ತಕಗಳು ಮತ್ತು ಹಣಕಾಸು ಹೇಳಿಕೆಗಳನ್ನು ನೀಡಿದೆ ಎಂದು ಸಿಬಿಐ ವಕ್ತಾರ ಆರ್.ಸಿ.ಜೋಶಿ ಹೇಳಿದ್ದಾರೆ. ಕಂಪನಿಯು ಪ್ರವರ್ತಕರ ಕೊಡುಗೆಯ ಬಗ್ಗೆಯೂ ತಪ್ಪು ಮಾಹಿತಿಯನ್ನು ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಕೋಸ್ಟಲ್ ಪ್ರಾಜೆಕ್ಟ್ ಲಿಮಿಟೆಡ್ ಕಂಪನಿಯ ಸಾಲದ ಖಾತೆಯು ಅಕ್ಟೋಬರ್ 28, 2013 ರಿಂದ ಪೂರ್ವಾನ್ವಯದೊಂದಿಗೆ ಎನ್‌ಪಿಎ ಆಗಿದೆ. ಕಳೆದ ವರ್ಷ ಫೆಬ್ರುವರಿ 20 ರಂದು ಇದನ್ನು ವಂಚನೆ ಪ್ರಕರಣ ಎಂದು ಘೋಷಿಸಲಾಗಿದೆ.

ಕಂಪನಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಬ್ಬಿನೇನಿ ಸುರೇಂದ್ರ ಜೊತೆಗೆ ವ್ಯವಸ್ಥಾಪಕ ನಿರ್ದೇಶಕರಾದ ಗರಪತಿ ಹರಿಹರ ರಾವ್, ನಿರ್ದೇಶಕರಾದ ಶ್ರೀಧರ್ ಚಂದ್ರಶೇಖರನ್ ನಿವಾರ್ತಿ, ಶರದ್ ಕುಮಾರ್, ಗ್ಯಾರಂಟರ್ ಕೆ ರಾಮುಲಿ, ಕೆ ಅಂಜಮ್ಮ, ಮತ್ತೊಂದು ಕಂಪನಿ ರವಿ ಕೈಲಾಸ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ರಮೇಶು ಪಾಸುಪ್ ಮತ್ತು ಗೋವಿಂದ್ ಕುಮಾರ್ ಇರಾನಿ ಹೆಸರನ್ನೂ ಸಿಬಿಐ ಪ್ರಕರಣದಲ್ಲಿ ಸೇರಿಸಿದೆ.

"ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮತ್ತು ವಿಜಯವಾಡದಲ್ಲಿ ಆರೋಪಿಗಳ ಮನೆಗಳು ಮತ್ತು ಅಧಿಕೃತ ಕಚೇರಿಗಳಲ್ಲಿ ಶೋಧ ನಡೆಸಲಾಗಿದ್ದು, ಈ ಸಂದರ್ಭ ದೋಷಾರೋಪಣೆಗೆ ಸಂಬಂಧಿಸಿದ ಹಲವು ದಾಖಲೆಗಳು ಮತ್ತು ಸಾಕ್ಷ್ಯಗಳು ಸಿಕ್ಕಿವೆ, " ಎಂದು ಜೋಶಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.