ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂತ ವೈದ್ಯಕೀಯ ಪ್ರೊಫೆಸರ್‌ ವಿರುದ್ಧ ಸಿಬಿಐ ತನಿಖೆ!

Last Updated 29 ಆಗಸ್ಟ್ 2020, 12:13 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರು ಮೂಲದ ಕಂಪನಿಯೊಂದರಿಂದಲೇ ಕೃತಕ ಹಲ್ಲುಗಳನ್ನು (ಡೆಂಟಲ್‌‌ ಇಂಪ್ಲಾಂಟ್ಸ್‌) ಖರೀದಿಸಲು ತನ್ನ ರೋಗಿಗಳಿಗೆ ಸೂಚಿಸುತ್ತಿದ್ದ ಆರೋಪದಡಿ ಪಟ್ನಾದ ಏಮ್ಸ್‌ನ ದಂತವೈದ್ಯಕೀಯ ಉಪನ್ಯಾಸಕ, ವೈದ್ಯರೊಬ್ಬರನ್ನು ಸಿಬಿಐ ತನಿಖೆಗೊಳಪಡಿಸಿದೆ.

ಕಂಪನಿಯು ಹೆಚ್ಚಿನ ದರಕ್ಕೆಡೆಂಟಲ್‌‌ ಇಂಪ್ಲಾಂಟ್ಸ್‌ಗಳನ್ನು ಮಾರಾಟ ಮಾಡುತ್ತಿತ್ತು. ಅಧಿಕವಾಗಿ ಪಡೆದಿದ್ದ ಹಣವನ್ನು ಡಾ.ಶೈಲೇಶ್‌ ಕುಮಾರ್‌ ಮುಕುಲ್‌ಗೆ ನೀಡುತ್ತಿತ್ತು ಎಂಬ ಆರೋಪವಿದೆ. 2013ರಿಂದ 2019ರವರೆಗೆ ಈ ಪಿತೂರಿ ನಡೆಸಿದ ಆರೋಪದಡಿ ಮುಕುಲ್‌ ವಿರುದ್ಧ ಸಿಬಿಐ ಮಂಗಳವಾರ ಪ್ರಕರಣ ದಾಖಲಿಸಿದೆ.

‘ಚಿಕಿತ್ಸೆ ಪಡೆಯಲು ಆಗಮಿಸುವ ರೋಗಿಗಳಿಗೆ ನೀಡುವ ‘ಒಪಿಡಿ ಬುಕ್‌ಲೆಟ್‌’ನಲ್ಲಿ ಡೆಂಟಲ್‌ ಇಂಪ್ಲಾಟ್ಸ್‌ಗಳನ್ನು ಮುಕುಲ್‌ ಬರೆಯುತ್ತಿರಲಿಲ್ಲ. ಬದಲಾಗಿ ಲ್ಯಾಬ್‌ ಸಹಾಯಕರಿಗೆ ಅಥವಾ ನೇರವಾಗಿ ಎಂ.ಎಸ್‌. ಆಸ್ಟಿಯೊ3ಡಿ ಕಂಪನಿಗೆ ಹಣ ಕಳುಹಿಸಲು ಸೂಚಿಸುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಸ್ತುತ, ಪ್ರಕರಣದಲ್ಲಿ ಡಾ.ಮುಕುಲ್‌ ಅವರನ್ನಷ್ಟೇ ಆರೋಪಿಯನ್ನಾಗಿ ಮಾಡಲಾಗಿದ್ದು, ಬೆಂಗಳೂರು ಹಾಗೂ ಪಟ್ನಾದಲ್ಲಿರುವ ಕಂಪನಿಯ ಹೆಸರನ್ನು ಸೇರಿಸಲಾಗಿಲ್ಲ. ಪ್ರಕರಣದ ತನಿಖೆ ತ್ವರಿತವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT