ಮಂಗಳವಾರ, ಮೇ 17, 2022
30 °C

ಕೇರಳ: ಹೈ–ಸ್ಪೀಡ್‌ ರೈಲು ಯೋಜನೆಗೆ ಕೇಂದ್ರ ಅಸ್ತು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕೇರಳದ ರಾಜಧಾನಿ ತಿರುವನಂತಪುರ ಮತ್ತು ಕಾಸರಗೋಡು ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶಿತ ಸೆಮಿ ಹೈಸ್ಪೀಡ್ ರೈಲು ಯೋಜನೆಗೆ ₹ 64 ಸಾವಿರ ಕೋಟಿ ಸಂಪನ್ಮೂಲ ಕ್ರೋಡೀಕರಿಸುವ ಯೋಜನೆಗೆ ಕೇಂದ್ರ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ.

ರಾಜ್ಯದ ಹಿರಿಯ ಅಧಿಕಾರಿಯೊಬ್ಬರು ಈ ಮಾಹಿತಿ ದೃಢಪಡಿಸಿದ್ದಾರೆ. ಯೋಜನೆಗೆ ₹ 33,700 ಕೋಟಿ ಒದಗಿಸಲು ಜಪಾನ್‌ನ ಸಂಸ್ಥೆ ಜೆಐಸಿಎ ಸಮ್ಮತಿಸಿತ್ತು. ಆದರೆ, ಬಳಿಕ ಮೊತ್ತ ಕಡಿತ ಮಾಡಿದ ಬಳಿಕ ಸಂಪನ್ಮೂಲ ಸಂಗ್ರಹಿಸುವ ಪರಿಷ್ಕೃತ ಯೋಜನೆ ಸಲ್ಲಿಸುವಂತೆ ಕೇಂದ್ರ ಸೂಚಿಸಿತ್ತು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಈ ಬಗ್ಗೆ ಬರೆದ ಪತ್ರದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ಸಂಬಂಧಿತ ಅನುಮೋದನೆ ಬಳಿಕ ನೋಡಲ್ ಏಜೆನ್ಸಿ ಕೇರಳ ರೈಲು ಅಭಿವೃದ್ಧಿ ನಿಗಮ (ಕೆ–ರೈಲ್) ಸಂಬಂಧ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬಹುದು’ ಎಂದು ತಿಳಿಸಿದ್ದಾರೆ.

ಸೆಮಿ ಹೈ ಸ್ಪೀಡ್ ರೈಲ್‌ ಯೋಜನೆಗೆ ₹ 63,941 ಕೋಟಿ ಸಂಪನ್ಮೂಲ ಕ್ರೋಡೀಕರಣ ಕುರಿತಂತೆ ಜಪಾನ್‌ ಇಂಟರ್‌ನ್ಯಾಷನಲ್‌ ಕೋ ಆಪರೇಟಿವ್ ಏಜೆನ್ಸಿ ಜೊತೆಗೂಡಿ ಕಾರ್ಯ ನಿರ್ವಹಿಸಬೇಕು ಎಂದು ಕೇಂದ್ರ ತಿಳಿಸಿದೆ.

ಉದ್ದೇಶಿತ ರೈಲು 529.45 ಕಿ.ಮೀ ಅಂತರ ಒಳಗೊಂಡಿದ್ದು, 4 ಗಂಟೆಯಲ್ಲಿ ಕ್ರಮಿಸಲಿದೆ ಎನ್ನಲಾಗಿದೆ. ಈಗ ಉಭಯ ನಗರಗಳ ನಡುವಣ ಪ್ರಯಾಣ ಅವಧಿ 12 ಗಂಟೆಗಳು. ತಿರುವನಂತಪುರ–ಎರ್ನಾಕುಲಂ–ಕೊಚ್ಚಿ ಮಾರ್ಗವನ್ನು ರೈಲು 90 ನಿಮಿಷಗಳ ಅಂತರದಲ್ಲಿ ಕ್ರಮಿಸಲಿದೆ ಎಂದು ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು