ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೂ’ ಆ್ಯಪ್‌ ಬಳಸಲು ಕೇಂದ್ರದ ಸೂಚನೆ?

Last Updated 15 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಟ್ವಿಟರ್‌ ಜೊತೆಗಿನ ಜಟಾಪಟಿ ನಡೆದಿರುವಂತೆಯೇ, ಕೇಂದ್ರ ಸರ್ಕಾರ ಟ್ವಿಟರ್‌ಗೆ ಪರ್ಯಾಯವಾದ, ಸ್ವದೇಶಿಯ ‘ಕೂ’ ಆ್ಯಪ್‌ ವೇದಿಕೆಯನ್ನು ಮಾಹಿತಿ ಪ್ರಸಾರಕ್ಕೆ ಬಳಸಲು ಚಿಂತನೆ ನಡೆಸಿದೆ.

‘ಕೂ’ ಆ್ಯಪ್‌ನಲ್ಲಿ ಖಾತೆ ಹೊಂದಬೇಕು. ಯಾವುದೇ ಪ್ರಕಟಣೆ ಇದ್ದರೂ ಈ ವೇದಿಕೆಯಲ್ಲಿಯೇ ಸಾರ್ವಜನಿಕರಿಗೆ ಹಂಚಿಕೊಳ್ಳಬೇಕು ಎಂದುಎಲ್ಲ ಸಚಿವರು, ಹಿರಿಯ ಅಧಿಕಾರಿಗಳಿಗೂ ಸೂಚನೆ ನೀಡುವ ಸಂಭವವಿದೆ.

‘2–3 ಗಂಟೆ ತರುವಾಯ ಟ್ವಿಟರ್‌ನಲ್ಲೂ ಈ ಮಾಹಿತಿ ಹಂಚಿಕೊಳ್ಳಲಾಗುತ್ತದೆ. ಮೊದಲು ‘ಕೂ’ ಆ್ಯಪ್‌, 30 ನಿಮಿಷದ ನಂತರ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೆ ಮಾಡಬೇಕು ಎಂಬ ಚಿಂತನೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಮಾಹಿತಿ ಹಂಚಿಕೆಗೆ ‘ಕೂ‘ ಆ್ಯಪ್ ಅನ್ನೇ ಬಳಸುವಂತೆ ಕೇಂದ್ರ ಸರ್ಕಾರವು ಎನ್‌ಡಿಎ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳಿಗೂ ಸೂಚನೆ ನೀಡುವ ಸಂಭವವಿದೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT