ಭಾನುವಾರ, ಏಪ್ರಿಲ್ 2, 2023
33 °C

ಮೂತ್ರ ವಿಸರ್ಜಿಸಿದ್ದ ಶಂಕರ್‌ ಮಿಶ್ರಾ ಮಾತು ಅವಹೇಳನಕಾರಿ: ಸಂತ್ರಸ್ತ ವೃದ್ಧೆ ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ‘ಏರ್‌ ಇಂಡಿಯಾ ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ನನ್ನ ಮೇಲೆ ಕುಡಿದ ಅಮಲಿನಲ್ಲಿ ಮೂತ್ರ ವಿಸರ್ಜಿಸಿದ್ದ ಆರೋಪಿ ಶಂಕರ್‌ ಮಿಶ್ರಾ ಈಗ ತಾನು ಮೂತ್ರ ವಿಸರ್ಜಿಸಿಯೇ ಇಲ್ಲ ಎಂದು ಹೇಳಿದ್ದಾರೆ. ಸ್ವತಃ ನಾನೇ ಮೂತ್ರ ಮಾಡಿಕೊಂಡಿರಬಹುದು ಎಂದೂ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅವರು ಆಡಿರುವ ಮಾತುಗಳು ಅವಹೇಳನಕಾರಿಯಾಗಿವೆ. ಜೊತೆಗೆ ಸತ್ಯಕ್ಕೆ ದೂರವಾಗಿವೆ’ ಎಂದು ಸಂತ್ರಸ್ತ ವೃದ್ಧೆ ಶನಿವಾರ ಕಿಡಿಕಾರಿದ್ದಾರೆ.

‘ನನ್ನ ಕಕ್ಷಿದಾರರ ವಿರುದ್ಧ ಶಂಕರ್‌ ಮಿಶ್ರಾ ಪರ ವಕೀಲರು ಮಾಡಿರುವ ಆರೋಪಗಳು ಸುಳ್ಳಿನಿಂದ ಕೂಡಿವೆ. ಅದೊಂದು ಕಟ್ಟು ಕಥೆ. ಜೊತೆಗೆ ಅವಹೇಳನಕಾರಿಯಾದುದು. ಆರೋಪಿತರ ಹೇಳಿಕೆಯು ಅವರು ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಶಗಳಿಗೆ ತದ್ವಿರುದ್ಧವಾಗಿದೆ’ ಎಂದು ಸಂತ್ರಸ್ತೆ ಪರ ವಕೀಲ ಅಂಕುರ್‌ ಮಹಿಂದ್ರೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

‘ಆರೋಪಿಯು ತನ್ನಿಂದಾಗಿರುವ ತಪ್ಪಿಗಾಗಿ ಪಶ್ಚಾತಾಪ ಪಡುವ ಬದಲು ದೂರುದಾರರಿಗೆ ಮತ್ತಷ್ಟು ಕಿರುಕುಳ ನೀಡುವ ಉದ್ದೇಶದಿಂದ ಸುಳ್ಳು ಮಾಹಿತಿಗಳನ್ನು ಹರಡುತ್ತಿದ್ದಾರೆ’ ಎಂದೂ ದೂರಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು