ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಹಾದ್, ಭಗವದ್ಗೀತೆ ಹಾಗೂ ಕ್ರಿಶ್ಚಿಯನ್ ಧರ್ಮದಲ್ಲೂ ಇದೆ: ಶಿವರಾಜ್ ಪಾಟೀಲ್

Last Updated 21 ಅಕ್ಟೋಬರ್ 2022, 2:49 IST
ಅಕ್ಷರ ಗಾತ್ರ

ನವದೆಹಲಿ: ಜಿಹಾದ್ ಪರಿಕಲ್ಪನೆಯು ಇಸ್ಲಾಂನಲ್ಲಿ ಮಾತ್ರವಲ್ಲ, ಭಗವದ್ಗೀತೆ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿಯೂ ಇದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಿವರಾಜ್ ಪಾಟೀಲ್ ಗುರುವಾರ ಹೇಳಿದ್ದಾರೆ.

ಪಾಟೀಲ್ ಹೇಳಿಕೆ ಕುರಿತಂತೆ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದೆ.

ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮೊಹ್ಸಿನಾ ಕಿದ್ವಾಯಿ ಅವರ ಜೀವನಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಲೋಕಸಭೆಯ ಮಾಜಿ ಸ್ಪೀಕರ್ ಮತ್ತು ಕೇಂದ್ರದ ಮಾಜಿ ಸಚಿವ ಪಾಟೀಲ್, ಇಸ್ಲಾಂ ಧರ್ಮದಲ್ಲಿ ಜಿಹಾದ್ ಬಗ್ಗೆ ಸಾಕಷ್ಟು ಚರ್ಚೆಗಳಿವೆ ಎಂದು ಹೇಳಲಾಗುತ್ತದೆ. ಸರಿಯಾದ ಉದ್ದೇಶಗಳನ್ನು ಹೊಂದಿದ್ದರೂ ಮತ್ತು ಸರಿಯಾದ ಕೆಲಸವನ್ನು ಮಾಡುತ್ತಿದ್ದರೂ ಯಾರೂ ಅರ್ಥಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದರು.

‘ಇದು ಕುರಾನ್‌ನಲ್ಲಿ ಮಾತ್ರವಲ್ಲ, ಭಗವದ್ಗೀತೆಯ ಭಾಗವಾದ ಮಹಾಭಾರತದಲ್ಲಿಯೂ ಸಹ ಇದೆ. ಶ್ರೀ ಕೃಷ್ಣನು ಅರ್ಜುನನಿಗೆ ಜಿಹಾದ್ ಬಗ್ಗೆ ಹೇಳುತ್ತಾನೆ. ಈ ವಿಷಯವು ಕುರಾನ್ ಅಥವಾ ಗೀತೆಯಲ್ಲಿ ಮಾತ್ರವಲ್ಲದೆ ಕ್ರಿಶ್ಚಿಯನ್ ಧರ್ಮದಲ್ಲಿಯೂ ಇದೆ’ಎಂದು ಅವರು ಹಿಂದಿಯಲ್ಲಿ ನೀಡಿರುವ ತಮ್ಮ ಹೇಳಿಕೆಗಳಲ್ಲಿ ತಿಳಿಸಿದ್ದಾರೆ.

ಮೊಹ್ಸಿನಾ ಕಿದ್ವಾಯಿ ಅವರ ಪುಸ್ತಕವು ನಿಮ್ಮ ಧರ್ಮವನ್ನು ಅನುಸರಿಸುವಾಗ ಎಲ್ಲಾ ಧರ್ಮಗಳನ್ನು ಗೌರವಿಸುವ ಬಗ್ಗೆಯೂ ಹೇಳುತ್ತದೆ ಎಂದು ಪಾಟೀಲ್ ಹೇಳಿದರು. ಜಗತ್ತಿನಲ್ಲಿ ಶಾಂತಿ ನೆಲೆಸುವ ಅವಶ್ಯಕತೆ ಇದೆ ಎಂದು ಅವರು ಪ್ರತಿಪಾದಿಸಿದರು.

ಪಾಟೀಲ್ ಹೇಳಿಕೆಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಅವರು,‘ಎಎಪಿಯ ಗೋಪಾಲ್ ಇಟಾಲಿಯಾ ಮತ್ತು ರಾಜೇಂದ್ರ ಪಾಲ್ ನಂತರ ಕಾಂಗ್ರೆಸ್‌ನ ಶಿವರಾಜ್ ಪಾಟೀಲ್ ಶ್ರೀ ಕೃಷ್ಣ ಅರ್ಜುನನಿಗೆ ಜಿಹಾದ್ ಪ್ರವಚನ ನೀಡಿದರು ಎಂದು ಹೇಳುವ ಮೂಲಕ ಹಿಂದೂ ದ್ವೇಷ ಮತ್ತು ಮತಬ್ಯಾಂಕ್ ರಾಜಕಾರಣ ಮಾಡಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.

‘ಕಾಂಗ್ರೆಸ್ ಹಿಂದೂ/ಕೇಸರಿ ಭಯೋತ್ಪಾದನೆ ಇದೆ ಎಂದು ಹೇಳಿತು. ರಾಮಮಂದಿರವನ್ನು ವಿರೋಧಿಸಿತು, ರಾಮನ ಅಸ್ತಿತ್ವವನ್ನೂ ಪ್ರಶ್ನಿಸಿತ್ತು., ಹಿಂದುತ್ವ=ಐಎಸ್ಐಎಸ್ ಎಂದೂ ಹೇಳಿತ್ತು’ಎಂದು ಪೂನಾವಾಲಾ ಟ್ವೀಟ್ ಮೂಲಕ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT