ಮಂಗಳವಾರ, ಜನವರಿ 25, 2022
24 °C

40 ವರ್ಷಕ್ಕಿಂತ ಮೇಲಿನವರಿಗೆ ಬೂಸ್ಟರ್‌ ಡೋಸ್‌ಗೆ ಶಿಫಾರಸು

ಪಿಟಿಐ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ನವದೆಹಲಿ: 40 ವರ್ಷಕ್ಕಿಂತ ಮೇಲಿನ ವಯಸ್ಸಿನವರಿಗೆ ಕೋವಿಡ್‌–19 ತಡೆ ಲಸಿಕೆಯ ಬೂಸ್ಟರ್‌ ಡೋಸ್‌ ಹಾಕಿಸಬೇಕು. ಸೋಂಕು ತಗಲುವ ಅಪಾಯ ಹೆಚ್ಚಿರುವವರು ಮತ್ತು ಸೋಂಕಿಗೆ ತೆರೆದುಕೊಳ್ಳುವ ಸಾಧ್ಯತೆ ಅಧಿಕ ಇರುವವರಿಗೆ ಆದ್ಯತೆ ನೀಡಬೇಕು ಎಂದು ಭಾರತೀಯ ಸಾರ್ಸ್‌ ಕೋವ್‌–2 ವೈರಾಣು ಸಂರಚನೆ ವಿಶ್ಲೇಷಣೆ ಒಕ್ಕೂಟದ (ಐಎನ್‌ಎಸ್‌ಎಸಿಒಜಿ) ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಐಎನ್‌ಎಸ್‌ಎಸಿಒಜಿಯ ವಾರದ ವಾರ್ತಾಪತ್ರದಲ್ಲಿ ಈ ಶಿಫಾರಸು ಮಾಡಲಾಗಿದೆ. ಕೊರೊನಾ ವೈರಾಣುವಿನ ರೂಪಾಂತರಗಳ ಬಗ್ಗೆ ನಿಗಾ ಇರಿಸುವುದಕ್ಕಾಗಿಯೇ ಐಎನ್‌ಎಸ್ಎಸಿಒಜಿಯನ್ನು ರಚಿಸಲಾಗಿದೆ. 

‘ಈವರೆಗೆ ಲಸಿಕೆ ಹಾಕಿಸಿಕೊಂಡಿಲ್ಲದ, ಸೋಂಕು ತಗಲುವ ಅಪಾಯ ಹೆಚ್ಚು ಇರುವ ಎಲ್ಲರಿಗೂ ತಕ್ಷಣವೇ ಲಸಿಕೆ ಹಾಕಿಸಬೇಕು. 40 ವರ್ಷಕ್ಕಿಂತ ಹೆಚ್ಚು ವಯಸ್ಸಾದವರಿಗೆ ಬೂಸ್ಟರ್ ಡೋಸ್‌ ಹಾಕಿಸುವ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದು ಎನ್‌ಎಸ್‌ಎಸಿಒಜಿ ಹೇಳಿದೆ. 

ಸಾಂಕ್ರಾಮಿಕ ಸ್ಥಿತಿಯ ಬಗ್ಗೆ ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆಯಲ್ಲಿಯೂ ಕೋವಿಡ್‌ ಲಸಿಕೆಯ ಬೂಸ್ಟರ್‌ ಡೋಸ್‌ ನೀಡಬೇಕು ಎಂಬ ಬೇಡಿಕೆ ಕೇಳಿ ಬಂದಿತ್ತು.

ಅದರ ಮಧ್ಯದಲ್ಲಿಯೇ, ಐಎನ್‌ಎಸ್‌ಎಸಿಒಜಿ ಕೂಡ ಈ ಶಿಫಾರಸು ಮಾಡಿದೆ.  ಓಮೈಕ್ರಾನ್‌ ಪ್ರಕರಣಗಳು ದೃಢಪಟ್ಟ ಪ್ರದೇಶಗಳಿಗೆ ಹೋದವರು ಮತ್ತು ಅಲ್ಲಿಂದ ಬಂದವರ ಮೇಲೆ ನಿಗಾ ಇರಿಸಬೇಕು. ಸೋಂಕು ದೃಢಪಟ್ಟವರ ಸಂಪರ್ಕಿತ ರನ್ನು ಗುರುತಿಸಬೇಕು ಎಂದೂ ಶಿಫಾರಸಿನಲ್ಲಿ ಹೇಳಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು