ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಗ್‌ಕಾಂಗ್‌, ಬೀಜಿಂಗ್‌ನಲ್ಲಿ ಕೋವಿಡ್‌ ನಿಯಮ ಸಡಿಲಿಕೆ

Last Updated 5 ಮೇ 2022, 12:36 IST
ಅಕ್ಷರ ಗಾತ್ರ

ಹಾಂಗ್‌ಕಾಂಗ್‌: ಹಾಂಗ್‌ಕಾಂಗ್‌ನಲ್ಲಿ ಕೋವಿಡ್‌ ಪ್ರಕರಣಗಳು ಇಳಿಕೆಯಾಗುತ್ತಿರುವ ಕಾರಣ ಗುರುವಾರ ಕೋವಿಡ್‌ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದ್ದು, ಬೀಚ್‌ ಮತ್ತು ಈಜುಕೊಳವನ್ನು ಜನರಿಗೆ ಮತ್ತೆ ಮುಕ್ತಗೊಳಿಸಲಾಗಿದೆ. ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಹೊರಗಿನಿಂದ ಬರುವವರಿಗೆ ವಿಧಿಸಲಾಗಿದ್ದ ಕ್ವಾರಂಟೈನ್‌ ನಿಯಮವನ್ನು ತೆಗೆಯಲಾಗಿದೆ.

ಈ ಹಿಂದೆ ರೆಸ್ಟೋರೆಂಟ್‌ನಲ್ಲಿ ಒಂದು ಟೇಬಲ್‌ಗೆ ನಾಲ್ಕು ಜನ ಮಾತ್ರ ಕೂರಲು ಅವಕಾಶ ನೀಡಲಾಗಿತ್ತು. ಈ ಸಂಖ್ಯೆಯನ್ನು 8ಕ್ಕೆ ಏರಿಸಲಾಗಿದೆ.ಹೊರಾಂಗಣದಲ್ಲಿ ವ್ಯಾಯಾಮ ಅಥವಾ ಆಟವಾಡುವ ಕ್ರೀಡಾಪಟುಗಳು ಮಾಸ್ಕ್‌ ಧರಿಸುವ ಅಗತ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೀಜಿಂಗ್‌ನಲ್ಲಿ ಗುರುವಾರ ಹೊಸದಾಗಿ 50 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಚೀನಾದ 2ನೇ ಅತಿದೊಡ್ಡ ನಗರ ಶಾಂಘೈನಲ್ಲಿ 4,651 ಹೊಸ ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT