ಗುರುವಾರ , ಮೇ 13, 2021
44 °C

Covid-19 India Update: 1.61 ಲಕ್ಷ ಹೊಸ ಪ್ರಕರಣ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 1.61 ಲಕ್ಷ (1,61,736) ಪ್ರಕರಣಗಳು ದೃಢಪಟ್ಟಿವೆ. ಇದೇ ವೇಳೆ 879 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಸದ್ಯ 12.6 ಲಕ್ಷ (12,64,698) ಪ್ರಕರಣಗಳು ಸಕ್ರಿಯವಾಗಿದ್ದು, ಇವೂ ಸೇರಿದಂತೆ ಒಟ್ಟು ಪ್ರಕರಣಗಳ ಸಂಖ್ಯೆ 1.36 ಕೋಟಿಗೆ (1,36,89,453) ಏರಿಕೆಯಾಗಿದೆ. ಸಾವಿನ ಸಂಖ್ಯೆ 1.71 ಲಕ್ಷಕ್ಕೆ (1,71,058) ತಲುಪಿದೆ. ಸೋಮವಾರ ಚೇತರಿಸಿಕೊಂಡ 97,168 ಪ್ರಕರಣಗಳೂ ಸೇರಿ ಇದುವರೆಗೆ ಒಟ್ಟು 1.22 ಕೋಟಿ (1,22,53,697) ಸೋಂಕಿತರು ಗುಣಮುಖರಾಗಿದ್ದಾರೆ.

ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 5,66,278 ಸಕ್ರಿಯ ಪ್ರಕರಣಗಳು ಇವೆ. ಉಳಿದಂತೆ ಛತ್ತೀಸಗಡ (98,856), ಉತ್ತರ ಪ್ರದೇಶ (81,576 ) ಕರ್ನಾಟಕ (76,004), ಕೇರಳ 47,914 ಮತ್ತು  ತಮಿಳುನಾಡಿನಲ್ಲಿ (46,308) 45 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳಿವೆ.

25 ಕೋಟಿ ಮಾದರಿ ಪರೀಕ್ಷೆ
ಏಪ್ರಿಲ್‌ 12ರಂದು ನಡೆಸಿದ ಒಟ್ಟು 14 ಲಕ್ಷ ಪರೀಕ್ಷೆ ಸೇರಿದಂತೆ ಈವರೆಗೆ ಒಟ್ಟು 25.92 ಕೋಟಿ (25,92,07,108) ಮಾದರಿ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್‌ ಮಾಹಿತಿ ನೀಡಿದೆ. ಅದೇರೀತಿ, ಇದುವರೆಗೆ ಒಟ್ಟು 10.85 ಕೋಟಿ (10,85,33,085) ಜನರಿಗೆ ಕೋವಿಡ್-19 ಲಸಿಕೆ ನೀಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು