ಬುಧವಾರ, ಜನವರಿ 20, 2021
27 °C

Covid-19 India Update: 29 ಮಂದಿಯಲ್ಲಿ ಬ್ರಿಟನ್ ವೈರಾಣು; ನಾಳೆ ಲಸಿಕೆ ತಾಲೀಮು

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಬ್ರಿಟನ್‌ನಲ್ಲಿ ಮೊದಲ ಬಾರಿಗೆ ಪತ್ತೆಯಾದ ಹೊಸ ಸ್ವರೂಪದ ಕೊರೊನಾ ವೈರಾಣು, ಭಾರತದಲ್ಲಿ ಇಲ್ಲಿಯ ವರೆಗೆ 29 ಮಂದಿಯಲ್ಲಿ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

ಈ ನಡುವೆ ಕೋವಿಡ್ ಲಸಿಕೆ ನೀಡುವ ತಾಲೀಮು ಜನವರಿ 2 ಶನಿವಾರದಂದು ದೇಶದೆಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಪೂರ್ವ ತಯಾರಿಯನ್ನು ನಡೆಸಲಾಗಿದೆ.

ಕರ್ನಾಟಕದಲ್ಲಿ ಜನವರಿ 1ರಂದು 877 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದೆ. 1084 ಮಂದಿ ಚೇತರಿಸಿಕೊಂಡಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 9,20,373ಕ್ಕೆ ಏರಿಕೆಯಾಗಿದ್ದು, 8,97,200 ಮಂದಿ ಚೇತರಿಸಿಕೊಂಡಿದ್ದಾರೆ. ಹಾಗೆಯೇ 11,058 ಸಕ್ರಿಯ ಪ್ರಕರಣಗಳಿದ್ದು, 12,096 ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: 

ಹೊಸ ವರ್ಷದಂದು ಮುಂಬೈನಲ್ಲಿ ಹೊಸತಾಗಿ 631 ಕೋವಿಡ್-19 ಪ್ರಕರಣಗಳು ಕಂಡುಬಂದಿದೆ. 628 ಮಂದಿ ಗುಣಮುಖರಾಗಿದ್ದು, 9 ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ ಮುಂಬೈನಲ್ಲಿ ಒಟ್ಟು ಕೊರೊನಾ ವೈರಸ್ ಸಂಖ್ಯೆ 2,94,067ಕ್ಕೆ ಏರಿಕೆಯಾಗಿದೆ. ಈ ಪೈಕಿ 2,74,072 ಮಂದಿ ಚೇತರಿಸಿಕೊಂಡಿದ್ದು, 11,125 ಮಂದಿ ಮೃತಪಟ್ಟಿದ್ದಾರೆ. ಇನ್ನು 8005 ಸಕ್ರಿಯ ಪ್ರಕರಣಗಳು ದಾಖಲಾಗಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್-19 ಒಟ್ಟು ಪ್ರಕರಣಗಳ ಸಂಖ್ಯೆ 19,35,636ಕ್ಕೆ ಏರಿಕೆಯಾಗಿದ್ದು, 18,32,825 ಮಂದಿ ಚೇತರಿಸಿದ್ದಾರೆ. ಇನ್ನು 52,084 ಸಕ್ರಿಯ ಪ್ರಕರಣಗಳಿದ್ದು, 49,580 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಶುಕ್ರವಾರದಂದು 3524 ಹೊಸ ಪ್ರಕರಣಗಳು ದಾಖಲಾಗಿದ್ದು, 59 ಮಂದಿ ಮೃತಪಟ್ಟಿದ್ದಾರೆ. ಇನ್ನು 4,279 ಮಂದಿ ಗುಣಮುಖವಾಗಿದ್ದಾರೆ.

ಕೇರಳದಲ್ಲಿ ಶುಕ್ರವಾರದಂದು 4991 ಹೊಸ ಪ್ರಕರಣಗಳು ದಾಖಲಾಗಿದ್ದು, 5,153 ಮಂದಿ ಚೇತರಿಸಿದ್ದಾರೆ. ಹಾಗೆಯೇ 23 ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ 65054 ಸಕ್ರಿಯ ಪ್ರಕರಣಗಳಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು