ಬುಧವಾರ, ಜೂನ್ 16, 2021
28 °C

ದೆಹಲಿಯಲ್ಲಿ ಇದೇ 24ರ ತನಕ ಲಾಕ್‌ಡೌನ್‌ ವಿಸ್ತರಣೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ:‘ದೆಹಲಿಯಲ್ಲಿ ಕೋವಿಡ್‌ ಪ್ರಸರಣವನ್ನು ತಡೆಯಲು ಹೇರಲಾಗಿರುವ ಲಾಕ್‌ಡೌನ್‌ ಅನ್ನು ಒಂದು ವಾರದವರೆಗೆ ವಿಸ್ತರಿಸಲಾಗಿದೆ’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಭಾನುವಾರ ತಿಳಿಸಿದರು.

ಏಪ್ರಿಲ್‌ 19ರಂದು ವಿಧಿಸಲಾದ ಲಾಕ್‌ಡೌನ್‌ ಅನ್ನು ನಾಲ್ಕನೇ ಬಾರಿ ವಿಸ್ತರಿಸಲಾಗಿದ್ದು, ನಾಳೆ(ಸೋಮವಾರ) ಬೆಳಿಗ್ಗೆ 5 ಗಂಟೆಗೆ ಕೊನೆಗೊಳ್ಳಬೇಕಾಗಿದ್ದ ಲಾಕ್‌ಡೌನ್‌ ಅನ್ನು ಮೇ 24ರ ಬೆಳಿಗ್ಗೆವರೆಗೆ ವಿಸ್ತರಿಸಲಾಗಿದೆ.

‘ದೆಹಲಿಯಲ್ಲಿ ಕೋವಿಡ್‌ ಪರಿಸ್ಥಿತಿಯಲ್ಲಿ ಸುಧಾರಣೆಯಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಇಳಿಕೆಯಾಗಿದೆ. ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಕೆ  ಮಾಡುವುದರಿಂದ ‍ಪ್ರಕರಣಗಳು ಮತ್ತೆ ಹೆಚ್ಚಾಗಬಹುದು. ಹಾಗಾಗಿ ಲಾಕ್‌ಡೌನ್‌ ವಿಸ್ತರಿಸಲಾಗಿದೆ’ ಎಂದು ಕೇಜ್ರಿವಾಲ್‌ ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು