ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರ: ಒಂದೇ ದಿನದಲ್ಲಿ 5,324 ಹೊಸ ಕೋವಿಡ್ ಪ್ರಕರಣಗಳು

Last Updated 28 ಅಕ್ಟೋಬರ್ 2021, 5:25 IST
ಅಕ್ಷರ ಗಾತ್ರ

ಸಿಂಗಪುರ: ಸಿಂಗಪುರದಲ್ಲಿ ಕೋವಿಡ್‌ ಉಲ್ಬಣಗೊಂಡಿದ್ದು, ಒಂದೇ ದಿನ 5,324 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.

ಈ ಹೊಸ ಪ್ರಕರಣಗಳಲ್ಲಿ 661 ಪ್ರಕರಣಗಳು ವಲಸೆ ಕಾರ್ಮಿಕರಿರುವ ಸಾಮೂಹಿಕ ವಸತಿಗಳಲ್ಲಿ ಪತ್ತೆಯಾಗಿವೆ. 12 ಪ್ರಕರಣಗಳೂ ವಿದೇಶದಿಂದ ಆಗಮಿಸಿರುವವರಲ್ಲಿ ಪತ್ತೆಯಾಗಿವೆ. ಸೋಂಕಿನಿಂದ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಇದೊಂದು ಅಸಾಮಾನ್ಯ ಏರಿಕೆಯಾಗಿದ್ದು, ಮುಂದಿನ ಕೆಲವು ದಿನಗಳವರೆಗೆ ಸೋಂಕು ಪ್ರಸರಣದ ಮೇಲೆ ನಿಕಟವಾಗಿ ನಿಗಾ ಇಡಲಾಗುತ್ತದೆ‘ ಎಂದು ಅದು ತಿಳಿಸಿದೆ.

ಸಿಂಗಪುರದಲ್ಲಿ ಇಲ್ಲಿವರೆಗೆ ಕೋವಿಡ್‌ ಸೋಂಕಿನಿಂದ ಸಾವನ್ನಪ್ಪಿದ್ದವರ ಸಂಖ್ಯೆ 349ಕ್ಕೆ ಏರಿದೆ. ನಗರದ ವಿವಿಧ ಆಸ್ಪತ್ರೆಗಳಲ್ಲಿ 1,777 ಕೋವಿಡ್‌ ರೋಗಿಗಳು ದಾಖಲಾಗಿದ್ದಾರೆ. ಈ ಮೂಲಕ ಸಿಂಗಪುರದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 1,84,419ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT