ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಕೋವಿಡ್‌ ನೆಗೆಟಿವ್‌ ಪ್ರಮಾಣ ಪತ್ರವಿದ್ದರಷ್ಟೇ ಕರ್ನಾಟಕಕ್ಕೆ ಪ್ರವೇಶ

Last Updated 22 ಫೆಬ್ರುವರಿ 2021, 9:48 IST
ಅಕ್ಷರ ಗಾತ್ರ

ಕಾಸರಗೋಡು: ಕೇರಳದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಕೇರಳದೊಂದಿಗಿನ ಎಲ್ಲಾ ಗಡಿಯನ್ನು ಮುಚ್ಚಿವೆ. ಇದರಿಂದಾಗಿ ಕೇರಳದ ಕಾಸರಗೋಡು ಜಿಲ್ಲೆಯ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಆರೋಗ್ಯ ಸೇವೆ ಮತ್ತುಇನ್ನಿತರ ಪ್ರಮುಖ ಸೇವೆಗಳಿಗಾಗಿ ಕಾಸರಗೋಡು ಜಿಲ್ಲೆಯ ಜನರು ಮಂಗಳೂರಿನ ಮೇಲೆ ಅವಲಂಬಿತರಾಗಿದ್ದಾರೆ.

ದಕ್ಷಿಣ ಕನ್ನಡದೊಂದಿಗಿನ ಕೇರಳದ ಗಡಿಗಳನ್ನುಸೋಮವಾರ ಮುಚ್ಚಲಾಗಿದೆ. ಇದರಿಂದಾಗಿ ಕೇರಳ–ಕರ್ನಾಟಕ ಗಡಿಯಲ್ಲಿ ಹಲವಾರು ವಾಹನಗಳು ಜಮಾಯಿಸಿವೆ. ಕೋವಿಡ್‌ನ ನೆಗೆಟಿವ್‌ ಪ್ರಮಾಣ ಪತ್ರವಿದ್ದವರಿಗೆ ಮಾತ್ರ ಕೇರಳದಿಂದ ಕರ್ನಾಟಕಕ್ಕೆ ಬರಲು ಅವಕಾಶ ಕಲ್ಪಿಸಿಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT