ಬುಧವಾರ, ಡಿಸೆಂಬರ್ 8, 2021
25 °C

‘ಆಕ್ಷೇಪಾರ್ಹ’ ಕರ್ವಾ ಚೌತ್ ಜಾಹೀರಾತು ಹಿಂಪಡೆದ ಡಾಬರ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸಲಿಂಗಿ ದಂಪತಿ ಕರ್ವಾ ಚೌತ್ ಆಚರಣೆಯಲ್ಲಿ ತೊಡಗಿದ್ದ ದೃಶ್ಯಗಳು ಇದ್ದ ಜಾಹೀರಾತನ್ನು ಎಫ್‌ಎಂಸಿಜಿ ವಲಯದ ಪ್ರಮುಖ ಕಂಪನಿಯಾದ ಡಾಬರ್ ಹಿಂದಕ್ಕೆ ಪಡೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಬಿಜೆಪಿ ನಾಯಕರೊಬ್ಬರಿಂದ ವಿರೋಧ ವ್ಯಕ್ತವಾದ ನಂತರ ಕಂಪನಿ ಈ ತೀರ್ಮಾನ ಕೈಗೊಂಡಿದೆ. ಕಂಪನಿಯು ಈ ಜಾಹೀರಾತಿಗಾಗಿ ಬೇಷರತ್ ಕ್ಷಮೆ ಯಾಚಿಸಿದೆ.

ಫ್ಯಾಬ್‌ ಇಂಡಿಯಾ ಕಂಪನಿಯು ತನ್ನದೊಂದು ಜಾಹೀರಾತನ್ನು ಹಿಂದಕ್ಕೆ ಪಡೆದು ಕೆಲವೇ ದಿನಗಳಲ್ಲಿ ಈ ಪ್ರಸಂಗ ನಡೆದಿದೆ. ಈ ಜಾಹೀರಾತಿನಲ್ಲಿ ಇಬ್ಬರು ಯುವತಿಯರು ತಮ್ಮ ಮೊದಲ ಕರ್ವಾ ಚೌತ್ ಆಚರಣೆಗೆ ಸಿದ್ಧರಾಗುವ ಚಿತ್ರಣ ಇತ್ತು. ಯುವತಿಯರ ಪೈಕಿ ಒಬ್ಬಳು, ಫೆಮ್‌ ಕ್ರೀಮ್‌ಅನ್ನು ಇನ್ನೊಬ್ಬಳ ಮುಖಕ್ಕೆ ಹಚ್ಚುತ್ತಾಳೆ. ಇಬ್ಬರೂ ಕರ್ವಾ ಚೌತ್‌ ಆಚರಣೆಯ ಮಹತ್ವದ ಬಗ್ಗೆ ಚರ್ಚಿಸುತ್ತಾರೆ. ಆಗ ಅಲ್ಲಿ ಇನ್ನೊಬ್ಬಳು ಮಹಿಳೆ ಬಂದು, ಇಬ್ಬರಿಗೂ ಸೀರೆಯನ್ನು ಉಡುಗೊರೆಯಾಗಿ ನೀಡುತ್ತಾಳೆ. ನಂತರದಲ್ಲಿ ಇಬ್ಬರೂ ಯುವತಿಯರು ಗಂಡ–ಹೆಂಡತಿ ರೀತಿಯಲ್ಲಿ ಪರಸ್ಪರ ಎದುರಾಗಿ ಕುಳಿತುಕೊಂಡಿರುವ ದೃಶ್ಯಗಳೂ ಇದ್ದವು.

‘ಆಕ್ಷೇಪಾರ್ಹ’ ಜಾಹೀರಾತನ್ನು ಹಿಂದಕ್ಕೆ ಪಡೆಯುವಂತೆ ಡಾಬರ್ ಕಂಪನಿಗೆ ಹೇಳುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿರುವುದಾಗಿ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರ ಅವರು ಸೋಮವಾರ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು