ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ವಿನಾಶ ಉಂಟುಮಾಡುವ ಅಸ್ತ್ರಗಳ ವಿರುದ್ಧ ಒಟ್ಟಾಗಿ: ದಲೈಲಾಮಾ ಕರೆ

Last Updated 30 ಡಿಸೆಂಬರ್ 2022, 11:31 IST
ಅಕ್ಷರ ಗಾತ್ರ

ಬೋಧಗಯಾ: ಸಾಮೂಹಿಕ ವಿನಾಶ ಉಂಟುಮಾಡುವ ಅಸ್ತ್ರಗಳ ವಿರುದ್ಧಜಗತ್ತಿನಾದ್ಯಂತ ಇರುವ ಜನರು ಒಟ್ಟಾಗಿ ನಿಲುವು ಪ್ರಕಟಿಸಬೇಕೆಂದು ಟಿಬೆಟ್‌ ಧರ್ಮಗುರು ದಲೈಲಾಮಾ ಅವರು ಶುಕ್ರವಾರ ಮನವಿ ಮಾಡಿದ್ದಾರೆ.

ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್‌ನಲ್ಲಿ ಅಣುಬಾಂಬ್‌ ಉಂಟು ಮಾಡಿರುವ ಸಾಮೂಹಿಕ ನಾಶವನ್ನು ನೆನಪಿಸಿಕೊಂಡರು.

ಹಿರೋಶಿಮಾಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ದುರಂತದ ಕುರುಹುಗಳನ್ನು ಕಣ್ಣಾರೆ ಕಂಡಿದ್ದೇನೆ ಎಂದೂ ಹೇಳಿದ್ದಾರೆ.

‘ಹಲವು ದೇಶಗಳು ಅತ್ಯಾಧುನಿಕ ಅಣ್ವಸ್ತ್ರಗಳನ್ನು ಹೊಂದಿವೆ. ಆದರೆ ಇವುಗಳನ್ನು ವಿರೋಧಿಸುವ ಜನರೂ ಇದ್ದಾರೆ’ ಎಂದಿದ್ದಾರೆ.

ಚೀನಾದಲ್ಲಿ ಉಗಮವಾಗಿ ಭಾರತ ಸೇರಿದಂತೆ ಜಗತ್ತಿನಾದ್ಯಂತ ಹರಡುತ್ತಿರುವ ಕೋವಿಡ್‌ ಪಿಡುಗಿನ ಕುರಿತೂ ದಲೈಲಾಮಾ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಚೀನಾ ಮಹಿಳೆ ಬಂಧನ

ದಲೈಲಾಮಾ ಅವರಿಗೆ ಬೆದರಿಕೆಯೊಡ್ಡಿದ ಆರೋಪದಡಿ ಚೀನಾದ ಮಹಿಳೆಯೊಬ್ಬರನ್ನು ಬೋಧಗಯಾದ ಅತಿಥಿಗೃಹವೊಂದರಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT