ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ನಿರೀಕ್ಷಿತ ಜೀವಿತಾವಧಿಗೆ ಜಾತಿಯ ನಂಟು

Last Updated 24 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಪರಿಶಿಷ್ಟ ಪಂಗಡಗಳ ಪುರುಷರಿಗೆ ಕನಿಷ್ಠ ಆಯಸ್ಸು

* ದೇಶದ ಎಲ್ಲಾ ಪುರುಷರಿಗೆ ಹೋಲಿಸಿದರೆ ಪರಿಶಿಷ್ಟ ಪಂಗಡಗಳಿಗೆ ಸೇರಿದ ಪುರುಷರ ನಿರೀಕ್ಷಿತ ಜೀವಿತಾವಧಿ ತೀರಾ ಕಡಿಮೆ ಇತ್ತು. ಅತಿಹೆಚ್ಚು ನಿರೀಕ್ಷಿತ ಜೀವಿತಾವಧಿ ಹೊಂದಿರುವ ಪ್ರಬಲ ಎಂದು ಪರಿಗಣಿಸಲಾಗುವ ಜಾತಿಗಳ ಪುರುಷರಿಗೆ ಹೋಲಿಸಿದರೆ, ಪರಿಶಿಷ್ಟ ಪಂಗಡಕ್ಕೆ ಸೇರಿದ ಪುರುಷರು ಸರಾಸರಿ 7 ವರ್ಷಗಳಷ್ಟು ಮೊದಲೇ ಮರಣ ಹೊಂದುತ್ತಿದ್ದರು

* ಪರಿಶಿಷ್ಟ ಜಾತಿಗಳಿಗೆ ಸೇರಿದ ಪುರುಷರು, ಪ್ರಬಲ ಎಂದು ಪರಿಗಣಿಸಲಾಗುವ ಜಾತಿಗಳಿಗೆ ಸೇರಿದ ಪುರುಷರಿಗಿಂತ ಸರಾಸರಿ 6 ವರ್ಷಗಳಷ್ಟು ಬೇಗ ಮರಣ ಹೊಂದುತ್ತಿದ್ದರು. ಆದರೆ, ಪರಿಶಿಷ್ಟ ಪಂಗಡಗಳಿಗೆ ಸೇರಿದ ಪುರುಷರಿಗೆ ಹೋಲಿಸಿದರೆ ಈ ಪುರುಷರು ಸರಾಸರಿ 0.9 ವರ್ಷಗಳಷ್ಟು ಹೆಚ್ಚು ಕಾಲ ಬದುಕುತ್ತಿದ್ದರು

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪುರುಷರಿಗೆ ಹೋಲಿಸಿದರೆ, ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಪುರುಷರು ಹೆಚ್ಚುಕಾಲ ಬದುಕುತ್ತಿದ್ದರು. ಆದರೆ ಪ್ರಬಲ ಎಂದು ಪರಿಗಣಿಸಲಾಗುವ ಜಾತಿಗಳಿಗೆ ಸೇರಿದ ಪುರುಷರಿಗೆ ಹೋಲಿಸಿದರೆ, ಈ ವರ್ಗಗಳ ಪುರುಷರ ನಿರೀಕ್ಷಿತ ಜೀವಿತಾವಧಿ ಕಡಿಮೆ ಇತ್ತು

* ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಪುರುಷರ ನಿರೀಕ್ಷಿತ ಜೀವಿತಾವಧಿಯು ದೇಶದ ಎಲ್ಲಾ ಪುರುಷರ ಸರಾಸರಿ ನಿರೀಕ್ಷಿತ ಜೀವಿತಾವಧಿಗಿಂತ ಕಡಿಮೆ ಇತ್ತು. ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ನಿರೀಕ್ಷಿತ ಜೀವಿತಾವಧಿ ಹೊಂದಿದ್ದ ವರ್ಗಗಳೆಂದರೆ ಮುಸ್ಲಿಮರು ಮತ್ತು ಪ್ರಬಲ ಎಂದು ಪರಿಗಣಿಸಲಾಗುವ ಜಾತಿಗಳಾಗಿದ್ದವು.

* ದೇಶದ ಎಲ್ಲಾ ಮಹಿಳೆಯರಿಗೆ ಹೋಲಿಸಿದರೆ ಪರಿಶಿಷ್ಟ ಜಾತಿಗಳಿಗೆ ಸೇರಿದ ಮಹಿಳೆಯರ ನಿರೀಕ್ಷಿತ ಜೀವಿತಾವಧಿ ತೀರಾ ಕಡಿಮೆ ಇತ್ತು. ಅತಿಹೆಚ್ಚು ನಿರೀಕ್ಷಿತ ಜೀವಿತಾವಧಿ ಹೊಂದಿರುವ ಪ್ರಬಲ ಎಂದು ಪರಿಗಣಿಸಲಾಗುವ ಜಾತಿಗಳ ಮಹಿಳೆಯರಿಗೆ ಹೋಲಿಸಿದರೆ, ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರು ಸರಾಸರಿ 4.4 ವರ್ಷಗಳಷ್ಟು ಮೊದಲೇ ಮರಣ ಹೊಂದುತ್ತಿದ್ದರು

* ಪರಿಶಿಷ್ಟ ಪಂಗಡಗಳಿಗೆ ಸೇರಿದ ಮಹಿಳೆಯರ ನಿರೀಕ್ಷಿತ ಜೀವಿತಾವಧಿಯು, ಪ್ರಬಲ ಎಂದು ಪರಿಗಣಿಸಲಾಗುವ ಜಾತಿಗಳಿಗೆ ಸೇರಿದ ಮಹಿಳೆಯರಿಗಿಂತ ಸರಾಸರಿ 4.2 ವರ್ಷಗಳಷ್ಟು ಬೇಗ ಮರಣ ಹೊಂದುತ್ತಿದ್ದರು. ಆದರೆ, ಪರಿಶಿಷ್ಟ ಜಾತಿಗಳಿಗೆ ಸೇರಿದ ಮಹಿಳೆಯರಿಗೆ ಹೋಲಿಸಿದರೆ ಈ ಮಹಿಳೆಯರು ಸರಾಸರಿ 0.2 ವರ್ಷಗಳಷ್ಟು ಹೆಚ್ಚು ಕಾಲ ಬದುಕುತ್ತಿದ್ದರು

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರಿಗೆ ಹೋಲಿಸಿದರೆ, ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರು ಹೆಚ್ಚುಕಾಲ ಬದುಕುತ್ತಿದ್ದರು. ಆದರೆ ಪ್ರಬಲ ಎಂದು ಪರಿಗಣಿಸಲಾಗುವ ಜಾತಿಗಳಿಗೆ ಸೇರಿದ ಮಹಿಳೆಯರಿಗೆ ಹೋಲಿಸಿದರೆ, ಈ ವರ್ಗಗಳ ಮಹಿಳೆಯರ ನಿರೀಕ್ಷಿತ ಜೀವಿತಾವಧಿ ಕಡಿಮೆ ಇತ್ತು

* ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರ ನಿರೀಕ್ಷಿತ ಜೀವಿತಾವಧಿಯು ದೇಶದ ಎಲ್ಲಾ ಮಹಿಳೆಯರ ಸರಾಸರಿ ನಿರೀಕ್ಷಿತ ಜೀವಿತಾವಧಿಗಿಂತ ಕಡಿಮೆ ಇತ್ತು. ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ನಿರೀಕ್ಷಿತ ಜೀವಿತಾವಧಿ ಹೊಂದಿದ್ದ ವರ್ಗಗವೆಂದರೆ ಪ್ರಬಲ ಎಂದು ಪರಿಗಣಿಸಲಾಗುವ ಜಾತಿಗಳು ಮಾತ್ರ

ನಿರೀಕ್ಷಿತ ಜೀವಿತಾವಧಿ ಅಂತರ

ಪ್ರಬಲ ಎಂದು ಪರಿಗಣಿಸಲಾಗುವ ಜಾತಿಗಳ ಪುರುಷರು ಮತ್ತು ಮಹಿಳೆಯರ ನಿರೀಕ್ಷಿತ ಜೀವಿತಾವಧಿಯು, ಉಳಿದೆಲ್ಲಾ ಜಾತಿ ಮತ್ತು ಧರ್ಮಗಳ ಜನರಿಗಿಂತ ಹೆಚ್ಚು ಇದೆ. 1997–2000ನೇ ಸಾಲಿನಲ್ಲಿ ಇದ್ದ ನಿರೀಕ್ಷಿತ ಜೀವಿತಾವಧಿ ಅಂತರವು, 2013–2016ನೇ ಸಾಲಿನ ವೇಳೆಗೆ ಬದಲಾಗಿದೆ. ಎರಡೂ ಅವಧಿಯಲ್ಲಿ ಪ್ರಬಲ ಎಂದು ಪರಿಗಣಿಸಲಾಗುವ ಜಾತಿಗಳ ನಿರೀಕ್ಷಿತ ಜೀವಿತಾವಧಿಯು, ಉಳಿದೆಲ್ಲಾ ಜಾತಿ ಮತ್ತು ಧರ್ಮಗಳ ಜನರ ನಿರೀಕ್ಷಿತ ಜೀವಿತಾವಧಿಗಿಂತ ಹೆಚ್ಚೇ ಇದೆ. ಆದರೆ ಈ ಅಂತರದಲ್ಲಿ ಭಾರಿ ವ್ಯತ್ಯಾಸವಾಗಿದೆ

* 1997–2000ರ ಅವಧಿಯಲ್ಲಿ ಪ್ರಬಲ ಎಂದು ಪರಿಗಣಿಸಲಾಗುವ ಜಾತಿಗಳ ಪುರುಷರಿಗೆ ಹೋಲಿಸಿದರೆ, ಪರಿಶಿಷ್ಟ ಪಂಗಡಗಳಿಗೆ ಸೇರಿದ ಪುರುಷರು ಸರಾಸರಿ 8.4 ವರ್ಷಗಳಷ್ಟು ಬೇಗ ಮೃತಪಡುತ್ತಿದ್ದರು.2013–2016ರ ಅವಧಿ ವೇಳಗೆ ಈ ಅಂತರವು 7 ವರ್ಷಗಳಿಗೆ ಇಳಿಕೆಯಾಗಿತ್ತು. ಆದರೂ, ಇದು ದೇಶದ ಬೇರೆಲ್ಲಾ ವರ್ಗಗಳಿಗೆ ಹೋಲಿಸಿದರೆ ಅತ್ಯಂತ ಗರಿಷ್ಠ ಅಂತರವಾಗಿತ್ತು

*1997–2000ರ ಅವಧಿಯಲ್ಲಿ ಪ್ರಬಲ ಎಂದು ಪರಿಗಣಿಸಲಾಗುವ ಜಾತಿಗಳ ಪುರುಷರಿಗೆ ಹೋಲಿಸಿದರೆ, ಪರಿಶಿಷ್ಟ ಜಾತಿಗಳಿಗೆ ಸೇರಿದ ಪುರುಷರು ಸರಾಸರಿ 4.6 ವರ್ಷಗಳಷ್ಟು ಬೇಗ ಮೃತಪಡುತ್ತಿದ್ದರು. ಇದು ಆ ಅವಧಿಯಲ್ಲಿನ ಅತ್ಯಂತ ಗರಿಷ್ಠ ಅಂತರವಾಗಿತ್ತು.2013–2016ರ ಅವಧಿ ವೇಳಗೆ ಈ ಅಂತರವು 6.1 ವರ್ಷಗಳಿಗೆ ಏರಿಕೆಯಾಗಿತ್ತು

*1997–2000ರ ಅವಧಿಯಲ್ಲಿ ಪ್ರಬಲ ಎಂದು ಪರಿಗಣಿಸಲಾಗುವ ಜಾತಿಗಳ ಪುರುಷರಿಗೆ ಹೋಲಿಸಿದರೆ, ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಪುರುಷರು ಸರಾಸರಿ 2.7 ವರ್ಷಗಳಷ್ಟು ಬೇಗ ಮೃತಪಡುತ್ತಿದ್ದರು. 2013–2016ರ ಅವಧಿ ವೇಳಗೆ ಈ ಅಂತರವು 3.9 ವರ್ಷಗಳಿಗೆ ಏರಿಕೆಯಾಗಿತ್ತು

*1997–2000ರ ಅವಧಿಯಲ್ಲಿ ಪ್ರಬಲ ಎಂದು ಪರಿಗಣಿಸಲಾಗುವ ಜಾತಿಗಳ ಪುರುಷರಿಗೆ ಹೋಲಿಸಿದರೆ, ಮುಸ್ಲಿಂ ಪುರುಷರು ಸರಾಸರಿ 0.3 ವರ್ಷಗಳಷ್ಟು ಬೇಗ ಮೃತಪಡುತ್ತಿದ್ದರು. 2013–2016ರ ಅವಧಿಯ ವೇಳಗೆ ಈ ಅಂತರವು 2.6 ವರ್ಷಗಳಿಗೆ ಏರಿಕೆಯಾಗಿತ್ತು. ಇದು ಗರಿಷ್ಠ ಪ್ರಮಾಣದ ಏರಿಕೆಯಾಗಿದೆ

–––

* 1997–2000ರ ಅವಧಿಯಲ್ಲಿ ಪ್ರಬಲ ಎಂದು ಪರಿಗಣಿಸಲಾಗುವ ಜಾತಿಗಳ ಮಹಿಳೆಯರಿಗೆ ಹೋಲಿಸಿದರೆ, ಪರಿಶಿಷ್ಟ ಪಂಗಡಗಳಿಗೆ ಸೇರಿದ ಮಹಿಳೆಯರು 7.3 ವರ್ಷಗಳಷ್ಟು ಬೇಗ ಮೃತಪಡುತ್ತಿದ್ದರು.ಇದು ದೇಶದ ಬೇರೆಲ್ಲಾ ವರ್ಗಗಳಿಗೆ ಹೋಲಿಸಿದರೆ ಅತ್ಯಂತ ಗರಿಷ್ಠ ಅಂತರವಾಗಿತ್ತು. 2013–2016ರ ಅವಧಿ ವೇಳಗೆ ಈ ಅಂತರವು 4.2 ವರ್ಷಗಳಿಗೆ ಇಳಿಕೆಯಾಗಿತ್ತು

* 1997–2000ರ ಅವಧಿಯಲ್ಲಿ ಪ್ರಬಲ ಎಂದು ಪರಿಗಣಿಸಲಾಗುವ ಜಾತಿಗಳ ಪುರುಷರಿಗೆ ಹೋಲಿಸಿದರೆ ಪರಿಶಿಷ್ಟ ಜಾತಿಗಳು ಮತ್ತು ಇತರೆ ಹಿಂದುಳಿದ ವರ್ಗಗಳ ಮಹಿಳೆಯರು ಕಡಿಮೆ ವಯಸ್ಸಿನಲ್ಲಿಯೇ ಮೃತಪಡುತ್ತಿದ್ದರು. ಆದರೆ 2013–2016ನೇ ಅವಧಿಯ ವೇಳೆಗೆ ಈ ಅಂತರದಲ್ಲಿ ಇಳಿಕೆಯಾಗಿದೆ

*1997–2000ರ ಅವಧಿಯಲ್ಲಿ ಪ್ರಬಲ ಎಂದು ಪರಿಗಣಿಸಲಾಗುವ ಜಾತಿಗಳ ಪುರುಷರಿಗೆ ಹೋಲಿಸಿದರೆ ಮುಸ್ಲಿಂ ಮಹಿಳೆಯರು ಕಡಿಮೆ ವಯಸ್ಸಿನಲ್ಲಿಯೇ ಮೃತಪಡುತ್ತಿದ್ದರು. ಆದರೆ 2013–2016ನೇ ಅವಧಿಯ ವೇಳೆಗೆ ಈ ಅಂತರದಲ್ಲಿ 0.7 ವರ್ಷಗಳಷ್ಟು ಏರಿಕೆಯಾಗಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT