ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್: ಎಂಬಿಡಿಎಗೆ ₹8.54 ಕೋಟಿ ದಂಡ

Last Updated 22 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ನವದೆಹಲಿ:ರಫೇಲ್‌ ಯುದ್ಧವಿಮಾನ ಪೂರೈಕೆ ಒಪ್ಪಂದದ ಅಡಿ,ಯುರೋಪಿನ ಕ್ಷಿಪಣಿ ಅಭಿವೃದ್ಧಿ ಸಂಸ್ಥೆ ಎಂಬಿಡಿಎಗೆ ರಕ್ಷಣಾ ಸಚಿವಾಲಯವು ₹8.54 ಕೋಟಿ (10 ಲಕ್ಷ ಯೂರೊ) ದಂಡ ವಿಧಿಸಿದೆ.

ಖರೀದಿ ಮಾಡುವ ದೇಶದಲ್ಲಿ ಹೂಡಿಕೆ ಮಾಡಬೇಕು ಎಂಬ ನಿಯಮ ಅನುಷ್ಠಾನದಲ್ಲಿ ವಿಳಂಬ ಧೋರಣೆ ಅನುಸರಿಸಿದ್ದಕ್ಕೆ ಸಂಸ್ಥೆ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.

ರಫೇಲ್‌ ಯುದ್ಧ ವಿಮಾನ ತಯಾರಿಸುವ ಫ್ರಾನ್ಸ್‌ನ ಡಾಸೊ ಏವಿಯೇಷನ್‌ ಸಂಸ್ಥೆಗೆ ಎಂಬಿಡಿಎ ಸಂಸ್ಥೆಯುಕ್ಷಿಪಣಿಗಳನ್ನು ಪೂರೈಕೆ ಮಾಡುತ್ತದೆ. 2016ರಲ್ಲಿ, ಭಾರತ–ಫ್ರಾನ್ಸ್ ನಡುವೆ 36 ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಏರ್ಪಟ್ಟಿತ್ತು.

ಖರೀದಿ ಮಾಡುವ ದೇಶದಲ್ಲಿ ಹೂಡಿಕೆ ಮಾಡುವ ನಿಯಮವೂ ಇದರ ಭಾಗವಾಗಿತ್ತು. 2019ರ ಸೆಪ್ಟೆಂಬರ್ ಹಾಗೂ 2022ರ ಸೆಪ್ಟೆಂಬರ್ ನಡುವೆ ಒಪ್ಪಂದ ಮೌಲ್ಯದ ಶೇ 50ರಷ್ಟನ್ನು ಭಾರತದಲ್ಲಿ ಹೂಡಿಕೆ ಮಾಡಬೇಕಿತ್ತು. ಈ ಬಗ್ಗೆ ಕಳೆದ ಸೆಪ್ಟೆಂಬರ್‌ನಲ್ಲಿ ಸಿಎಜಿ ಗಮನ ಸೆಳೆದಿತ್ತು.

ನಿಯಮಾವಳಿಯಂತೆ ಎಂಬಿಡಿಎ ಸಂಸ್ಥೆಯು ಈಗಾಗಲೆ ದಂಡ ಪಾವತಿಸಿದೆ. ಜೊತೆಗೆ, ರಕ್ಷಣಾ ಸಚಿವಾಯದ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಿರುವುದಾಗಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT