ಗುರುವಾರ , ಜನವರಿ 21, 2021
20 °C

ದೆಹಲಿಯ ವಾಯು ಗುಣಮಟ್ಟ 'ಕಳಪೆ': ಭಾರತೀಯ ಹವಾಮಾನ ಇಲಾಖೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಭಾನುವಾರವೂ ಕುಸಿತಗೊಂಡಿದೆ. ಬೆಳಿಗ್ಗೆ 9 ಗಂಟೆ ವೇಳೆ, ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ) 245 ದಾಖಲಾಗಿದೆ.

ಇನ್ನೊಂದೆಡೆ, ತಾಪಮಾನ ಕಡಿಮೆಯಾಗುವುದು ಹಾಗೂ ಗಾಳಿಯ ವೇಗ ತಗ್ಗುವ ಪರಿಣಾಮ, ನಗರದಲ್ಲಿ ವಾಯು ಗುಣಮಟ್ಟ ಮತ್ತಷ್ಟೂ ಕುಸಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂಲಗಳು ಹೇಳಿವೆ.

24 ಗಂಟೆ ಅವಧಿಯಲ್ಲಿ ವಾಯು ಗುಣಮಟ್ಟವನ್ನು ದಾಖಲಿಸಲಾಗಿದೆ. ಈ ದತ್ತಾಂಶದ ಪ್ರಕಾರ, ಶನಿವಾರ ಈ ಸೂಚ್ಯಂಕ 231 ದಾಖಲಾಗಿದ್ದರೆ, ಶುಕ್ರವಾರ 137, ಗುರುವಾರ 302 ಮತ್ತು ಬುಧವಾರ 413ರಷ್ಟು ಇತ್ತು.

ಶನಿವಾರ ಗಾಳಿಯ ಗರಿಷ್ಠ ವೇಗ ಗಂಟೆಗೆ 15 ಕಿ.ಮೀ. ದಾಖಲಾಗಿತ್ತು. ಭಾನುವಾರ ಮತ್ತು ಸೋಮವಾರ ಈ ವೇಗ ಗಂಟೆಗೆ 8 ರಿಂದ 12 ಕಿ.ಮೀ. ಗೆ ಇಳಿಯಬಹುದು ಎಂದು  ಇಲಾಖೆ ತಿಳಿಸಿದೆ. ಗಾಳಿಯ ವೇಗ ತಗ್ಗಿದಷ್ಟೂ ವಾಯು ಗುಣಮಟ್ಟ ಮತ್ತಷ್ಟು ಹದಗೆಡಬಹುದು. ಮುಂದಿನ ಎರಡು ದಿನಗಳಲ್ಲಿ ಗುಣಮಟ್ಟ ಮತ್ತಷ್ಟೂ ಕುಸಿಯುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ದೆಹಲಿಯಲ್ಲಿ ಭಾನುವಾರ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಗರಿಷ್ಠ 26 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಲಿದೆ ಎಂದೂ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು