ಭಾನುವಾರ, ಮಾರ್ಚ್ 7, 2021
32 °C

ಆಘಾತಕಾರಿ ವಿಡಿಯೊ: ಪ್ರತಿಭಟನಾಕಾರರ ಏಟಿನಿಂದ ಪಾರಾಗಲು ಗೋಡೆ ಹಾರಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ರಾಜಧಾನಿಯೂ ನಿನ್ನೆ ಹಿಂದೆಂದೂ ಕಂಡು ಕೇಳರಿಯದ ಹಿಂಸಾಚಾರ ಮತ್ತು ಗಲಭೆಗೆ ಸಾಕ್ಷಿಯಾಯಿತು. ಗಣರಾಜ್ಯೋತ್ಸವ ದಿನದಂದು ಶಾಂತಿಯುತವಾಗಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದ್ದ ರೈತರ ಟ್ರ್ಯಾಕ್ಟರ್ ರ‍್ಯಾಲಿಯು ಪೊಲೀಸರು ಮತ್ತು ರೈತರ ನಡುವೆ ಸಂಘರ್ಷಕ್ಕೆ ತಿರುಗಿದ್ದು ನಿಜಕ್ಕೂ ಕಪ್ಪು ಚುಕ್ಕೆಯಾಗಿದೆ. 

ಎಎನ್‌ಐ ಟ್ವೀಟ್ ಮಾಡಿರುವ ಒಂದು ವಿಡಿಯೊದಲ್ಲಿ, ಲಾಠಿ ಹಿಡಿದು ದಾಳಿಗೆ ಬಂದ ಭಾರೀ ಸಂಖ್ಯೆಯ ಪ್ರತಿಭಟನಾಕಾರರಿಂದ ತಪ್ಪಿಸಿಕೊಳ್ಳಲು ಪೊಲೀಸರು ಮತ್ತು ಅರೆಸೇನಾ ಸಿಬ್ಬಂದಿಗಳು ಬಲವಂತವಾಗಿ ಕೆಂಪು ಕೋಟೆ ಸಂಕೀರ್ಣದಲ್ಲಿರುವ 15 ಅಡಿ ಗೋಡೆಯನ್ನು ಹಾರುತ್ತಿರುವ ಶಾಕಿಂಗ್ ದೃಶ್ಯವಿದೆ.

ಪೊಲೀಸರನ್ನೇ ಲಾಠಿ ಮತ್ತು ಕೋಲುಗಳಿಂದ ಪ್ರತಿಭಟನಾಕಾರರು ಥಳಿಸುತ್ತಿರುವುದು ಕಂಡುಬಂದಿದೆ.

ಮತ್ತೆ ಕೆಲವರು 15 ಅಡಿ ಎತ್ತರದ ಕಂಬಿಯನ್ನು ಜಂಪ್ ಮಾಡಿ ಕೆಂಪುಕೋಟೆಗೆ ಪ್ರವೇಶಿಸಿದರೆ, ಎರಡು ಟ್ರ್ಯಾಕ್ಟರ್‌ಗಳು ಲೋಹದ ಗೇಟನ್ನು ಗುದ್ದುತ್ತಿವೆ.

ಬಳಿಕ ಮತ್ತಷ್ಟು ಪ್ರತಿಭಟನಾಕಾರರು ಹಳದಿ ಧ್ವಜ ಹಿಡಿದು, ಕೈಗೆ ಸಿಕ್ಕಿದ್ದನ್ನೆಲ್ಲ ಪೊಲೀಸರ ಮೇಲೆ ಎಸೆಯುತ್ತಾ ಮುನ್ನುಗ್ಗುತ್ತಾರೆ.

ಬಳಿಕ ಹತ್ತಿರದ ಗೇಟ್ ಮುರಿಯುವ ಪ್ರತಿಭಟನಾಕಾರರು ಕೆಂಪುಕೋಟೆ ಒಳಗೆ ನುಗ್ಗುತ್ತಾರೆ.

ಇವುಗಳನ್ನೂ ಓದಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು