ಶುಕ್ರವಾರ, ಮೇ 7, 2021
26 °C

ದೆಹಲಿಯಲ್ಲಿ ಕೋವಿಡ್ ಪ್ರಮಾಣ ಇಳಿಮುಖ: 19,953 ಹೊಸ ಪ್ರಕರಣ, 338 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನೇದಿನೇ ಏರುಗತಿಯಲ್ಲಿ ಸಾಗಿದ್ದ ಕೊರೊನಾ ಸೋಂಕು ಹರಡುವಿಕೆ ಹಾಗೂ ಸಾವಿನ ಸಂಖ್ಯೆಯು ಮಂಗಳವಾರ ಇಳಿಮುಖವಾಗಿದೆ.

ಮಂಗಳವಾರ ಸಂಜೆಯವರೆಗೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದ 74,654 ಜನರ ಪೈಕಿ 19,953 (ಶೇ 26.73) ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಅವಧಿಯಲ್ಲಿ 18,788 ಜನ ಗುಣಮುಖರಾಗಿದ್ದಾರೆ. ಒಟ್ಟು 90,419 ಸಕ್ರಿಯ ಪ್ರಕರಣಗಳಿವೆ.

ಸತತ ಮೂರು ದಿನಗಳ ಕಾಲ 400ರ ಗಡಿ ದಾಟಿದ್ದ ಸಾವಿನ ಸಂಖ್ಯೆಯೂ ಕಡಿಮೆಯಾಗಿದ್ದು, 338ಕ್ಕೆ ಇಳಿದಿದೆ.

ಶೇ 35ಕ್ಕಿಂತ ಅಧಿಕ ಪ್ರಮಾಣ ತಲುಪಿದ್ದ ಸೋಂಕಿಗೆ ಒಳಗಾಗುವವರ ಪ್ರಮಾಣ ಮಂಗಳವಾರದಿಂದ ಕಡಿಮೆಯಾಗಿರುವುದೂ ಜನರ ಆತಂಕ ಕಡಿಮೆ ಮಾಡಿ, ಸಮಾಧಾನ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು