ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯ ಮದ್ಯದ ಅಂಗಡಿಗಳಲ್ಲಿ ಮಾರ್ಷಲ್‌ಗಳ ನಿಯೋಜನೆ!

ಕೋವಿಡ್ ನಿಯಮ ಪಾಲಿಸಲು ಈ ಕ್ರಮ
Last Updated 8 ಜೂನ್ 2021, 10:16 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಮದ್ಯದಂಗಡಿಗಳಲ್ಲಿ ಗ್ರಾಹಕರು ಮಾಸ್ಕ್‌ ಧರಿಸುವುದು, ವ್ಯಕ್ತಿಗತ ಅಂತರ ಕಾಪಾಡುವುದು ಸೇರಿದಂತೆ ‘ಕೋವಿಡ್‌–19‘ ನಿಯಮಗಳನ್ನು ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಮಾರ್ಷಲ್‌ ಮತ್ತು ಸಿಬ್ಬಂದಿಯನ್ನು ನೇಮಿಸಿಕೊಳ್ಳುವಂತೆ ದೆಹಲಿ ಸರ್ಕಾರ ಎಲ್ಲ ಮದ್ಯದಂಗಡಿ ಮಾಲೀಕರಿಗೆ ನಿರ್ದೇಶನ ನೀಡಿದೆ.

ಇದೇ ವೇಳೆ ಮದ್ಯದಂಗಡಿ ಸುತ್ತಾ ಕಾನೂನು ಮತ್ತು ಸುವಸ್ಥೆ ಕಾಪಾಡುವ ಸಂಬಂಧ ಸ್ಥಳೀಯ ಆಡಳಿತ ಮತ್ತು ಪೊಲೀಸರ ನೆರವು ಪಡೆಯುವಂತೆಯೂ ಮದ್ಯ ಮಾರಾಟಗಾರರಿಗೆ ನಿರ್ದೇಶನ ನೀಡಿದೆ.

ಸರ್ಕಾರದ ವ್ಯಾಪ್ತಿಗೆ ಒಳಪಡುವ ಡಿಎಸ್‌ಐಐಡಿಸಿ, ಡಿಟಿಟಿಡಿಸಿ, ಡಿಎಸ್‌ಸಿಎಸ್‌ಸಿ ಮತ್ತು ಡಿಸಿಸಿಡಬ್ಲ್ಯುಎಸ್‌ – ಈ ನಾಲ್ಕು ನಿಗಮಗಳು, ಮದ್ಯ ಮಾರಾಟದ ಅವಧಿಯಲ್ಲಿ ಹೆಚ್ಚುವರಿಯಾಗಿ ಮಾರ್ಷಲ್‌ಗಳನ್ನು ನಿಯೋಜಿಸುತ್ತವೆ. ಖಾಸಗಿ ಪರವಾನಗಿದಾರರು, ಇದೇ ರೀತಿ ಮಾರ್ಷಲ್‌ಗಳನ್ನು ನಿಯೋಜಿಸಿ, ಗ್ರಾಹಕರು ಕೋವಿಡ್‌ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು‘ ಎಂದು ಅಬ್ಕಾರಿ ಇಲಾಖೆ ಜೂನ್ 6ರಂದು ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಿದೆ.

ದೆಹಲಿ ಮಹಾ ನಗರದಲ್ಲಿ 850 ಮದ್ಯದ ಅಂಗಡಿಗಳಿವೆ. ಇದರಲ್ಲಿ ಸರ್ಕಾರಿ ಏಜೆನ್ಸಿಗಳು ಮತ್ತು ಖಾಸಗಿ ಕಂಪನಿಗಳು ಸೇರಿವೆ. ಒಟ್ಟು ಮದ್ಯದಂಗಡಿಗಳಲ್ಲಿ ಶೇ 40ರಷ್ಟನ್ನು ಖಾಸಗಿಯವರೇ ನಡೆಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT