ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23 ವಾರಗಳ ಗರ್ಭಿಣಿಗೆ ಗರ್ಭಪಾತ ಮಾಡಿಸಿಕೊಳ್ಳಲು ದೆಹಲಿ ಹೈಕೋರ್ಟ್ ಅನುಮತಿ

Last Updated 25 ಮೇ 2021, 11:31 IST
ಅಕ್ಷರ ಗಾತ್ರ

ನವದೆಹಲಿ: 23 ವಾರಗಳ ಗರ್ಭಿಣಿಗೆ ಗರ್ಭಪಾತ ಮಾಡಿಸಿಕೊಳ್ಳಲು ದೆಹಲಿ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ. ಮಹಿಳೆಯ ಗರ್ಭದಲ್ಲಿ ಅವಳಿ ಭ್ರೂಣಗಳಿದ್ದು, ಅವುಗಳ ಮೆದುಳಿನಲ್ಲಿ ಸಮಸ್ಯೆಯಿದೆ. ಮಕ್ಕಳು ಹುಟ್ಟಿದ ಬಳಿಕ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೇ, ಸದ್ಯದ ಅವಧಿಯಲ್ಲಿ ಗರ್ಭಪಾತ ಸುರಕ್ಷಿತವಾಗಿಯೂ ಇರುತ್ತದೆ ಎಂದು ಏಮ್ಸ್‌ನ ತಜ್ಞರ ತಂಡ ವರದಿ ನೀಡಿದ ಬಳಿಕ ಹೈಕೋರ್ಟ್ ಈ ಆದೇಶ ನೀಡಿದೆ.

ಹುಟ್ಟಿನಿಂದಲೇ ಬರುವ ಮೆದುಳು ಸಂಬಂಧಿ ಕಾಯಿಲೆ ’ಡಾಂಡಿ ವಾಕರ್‌ ಮಾಲ್ಫರ್ಮೇಷನ್‌‘ ಕಾಯಿಲೆಯನ್ನು ತಮ್ಮ ಗರ್ಭದಲ್ಲಿರುವ ಭ್ರೂಣಗಳು ಹೊಂದಿವೆ. ಆದ್ದರಿಂದ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಬೇಕೆಂದು ಕೋರಿ ಮಹಿಳೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ಕೋರ್ಟ್, ಮಹಿಳೆಯನ್ನು ಪರೀಕ್ಷೆಗೊಳಪಡಿಸಿ ಭ್ರೂಣದ ಮತ್ತು ಮಹಿಳೆಯ ಆರೋಗ್ಯದ ಕುರಿತು ವರದಿ ನೀಡಬೇಕೆಂದು ಏಮ್ಸ್‌ಗೆ ಸೂಚಿಸಿತ್ತು ಮತ್ತು ವರದಿ ಸಲ್ಲಿಕೆಗೆ ಮೇ 24ರ ಗಡವು ನೀಡಿತ್ತು. ಅದರಂತೆ ಪರೀಕ್ಷೆ ನಡೆಸಿದ ಏಮ್ಸ್‌ ವೈದ್ಯರ ತಂಡ ಈ ವರದಿ ನೀಡಿತ್ತು.

ವೈದ್ಯರ ಮಂಡಳಿಯ ವರದಿ ಆಧರಿಸಿ ನ್ಯಾಯಮೂರ್ತಿ ರೇಖಾ ಪಾಟೀಲ್‌ ಮಹಿಳೆಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಿದ್ದಾರೆ. ಈ ಅರ್ಜಿ ಸಂಬಂಧ ಮಂಗಳವಾರ ನ್ಯಾಯಾಲಯದಲ್ಲಿ ಮಹಿಳೆ ಮತ್ತು ಅವರ ಪತಿ ಹಾಜರಿದ್ದರು. ಈ ಗರ್ಭಪಾತದಿಂದ ಮಹಿಳೆಯ ಆರೋಗ್ಯದ ಮೇಲೆ ಆಗಬಹುದಾದ ಅಡ್ಡಪರಿಣಾಮದ ಕುರಿತು ತಮಗೆ ಮಾಹಿತಿ ಇದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಏ.28ರಂದೇ ದಂಪತಿಗೆ ಭ್ರೂಣಗಳ ಮೆದುಳು ಬೆಳವಣಿಗೆ ಆಗದೇ ಇರುವುದನ್ನು ವೈದ್ಯರು ತಿಳಿಸಿದ್ದರು. ಆದರೆ ಅವರಿಗೆ ಗರ್ಭಪಾತ ಮಾಡಿಸಿಕೊಳ್ಳಲು ಕೋರ್ಟ್ ಅನುಮತಿ ಬೇಕೆಂದು ತಿಳಿದಿರಲಿಲ್ಲ. ಮೇ 20ರಂದು ಅವರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದರಿಂದ ಪ್ರಕ್ರಿಯೆ ತಡವಾಯಿತು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT