ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯ ಜಾಮಾ ಮಸೀದಿ ದೇಶದ ಅತಿದೊಡ್ಡ ಮಸೀದಿಯಲ್ಲ: ಇತಿಹಾಸಕಾರರ ಅಭಿಪ್ರಾಯ

Last Updated 7 ಆಗಸ್ಟ್ 2022, 13:50 IST
ಅಕ್ಷರ ಗಾತ್ರ

ನವದೆಹಲಿ: ‘ದೆಹಲಿಯಲ್ಲಿರುವ ಜಾಮಾ ಮಸೀದಿಯು ದೇಶದ ಅತಿದೊಡ್ಡ ಮಸೀದಿಯಲ್ಲ’ ಎಂದು ಹಲವು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

‘ನಗರದಲ್ಲಿ ಅಳವಡಿಸಲಾಗಿರುವ ಹಲವು ಹೋರ್ಡಿಂಗ್‌ಗಳು ಹಾಗೂ ದೆಹಲಿ ಪ್ರವಾಸೋದ್ಯಮದ ವೆಬ್‌ಸೈಟ್‌ನಲ್ಲಿ ಜಾಮಾ ಮಸೀದಿಯನ್ನು ಅತಿದೊಡ್ಡ ಮಸೀದಿ ಎಂದು ಸಂಬೋಧಿಸಲಾಗಿದೆ. ಆದರೆ ಈ ಶ್ರೇಯವು ಭೋಪಾಲ್‌ನಲ್ಲಿರುವ ತಾಜ್‌–ಉಲ್‌–ಮಸೀದಿಗೆ ಸೇರಬೇಕು’ ಎಂದು ಇತಿಹಾಸಕಾರರು ಹೇಳಿದ್ದಾರೆ.

ಜಾಮಾ ಮಸೀದಿಯನ್ನು 1656ರಲ್ಲಿ ಮೊಘಲ್‌ ದೊರೆ ಶಹಾಜಹಾನ್‌ ಕಟ್ಟಿಸಿದ್ದರು. ತಾಜ್‌ ಉಲ್‌ ಮಸೀದಿಯನ್ನುಶಹಾಜಹಾನ್‌ ಬೇಗಂ ಅವರ ಕಾಲಾವಧಿಯಲ್ಲಿ (‌1868 ರಿಂದ 1901) ನಿರ್ಮಿಸಲಾಗಿತ್ತು.

‘ದೆಹಲಿ ಸರ್ಕಾರದವರೇ, ಜಾಮಾ ಮಸೀದಿಯು ಭಾರತದ ಅತಿದೊಡ್ಡ ಮಸೀದಿಯಲ್ಲ. ಈ ಶ್ರೇಯ ಭೋಪಾಲ್‌ನ ತಾಜ್‌ ಉಲ್‌ ಮಸೀದಿಗೆ ಸಲ್ಲುತ್ತದೆ’ ಎಂದು ದೆಹಲಿಯ ಇತಿಹಾಸಕಾರ ಸೊಹೈಲ್‌ ಹಶ್ಮಿ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ದಾರುಲ್‌ ಉಲೂಮ್‌ನ ಪ್ರೊ.ಹಸನ್‌ ಖಾನ್‌ ಅವರು ಸೊಹೈಲ್‌ ಅವರ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT