ಮಂಗಳವಾರ, ಆಗಸ್ಟ್ 16, 2022
30 °C

ದೆಹಲಿ ಮೆಟ್ರೊ: ವರ್ಷಾಂತ್ಯ ವೇಳೆಗೆ ಎನ್‌ಸಿಎಂಸಿ ಬಳಕೆಗೆ ಅವಕಾಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿ ಮೆಟ್ರೊದಲ್ಲಿ ನಾಲ್ಕನೇ ಹಂತದಲ್ಲಿ ಅಸ್ವಿತ್ವಕ್ಕೆ ಬರಲಿರುವ ಸ್ವಯಂಚಾಲಿತ ಶುಲ್ಕ ಸಂಗ್ರಹ ಯಂತ್ರದಲ್ಲಿ ದೇಶದಾದ್ಯಂತ ಅಂಗೀಕೃತವಾಗುವ ಏಕರೂಪದ ಕಾರ್ಡ್ ಜತೆಗೆ ಮೊಬೈಲ್ ಫೋನ್ ಬಳಸಿಯೂ ಪ್ರವೇಶ ಪಡೆಯಬಹುದು ಎಂದು ಡಿಎಂಆರ್‌ಸಿ ಮುಖ್ಯಸ್ಥ ಮಂಗುಸಿಂಗ್ ತಿಳಿಸಿದ್ದಾರೆ.

ವಿಶ್ವದ ಇತರೆ ಮೆಟ್ರೊ ಸೇವೆಗೆ ಹೋಲಿಸಿದರೆ ದೆಹಲಿ ಮೆಟ್ರೊ ‘ಆಧುನಿಕ ಮೆಟ್ರೊ ವ್ಯವಸ್ಥೆ’ ಎಂದು ಬಣ್ಣಿಸಿರುವ ಅವರು, ವರ್ಷಾಂತ್ಯದ ವೇಳೆಗೆ ಈ ಎರಡೂ ಸೇವೆಗಳು ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಜಾರಿಗೆ ಬರಲಿವೆ ಎಂದಿದ್ದಾರೆ.

ಏಕರೂಪದ ಕಾರ್ಡ್ (ಎನ್‌ಸಿಎಂಸಿ) ಅನ್ನು ಪ್ರದಾನಿ ನರೇಂದ್ರ ಮೋದಿ 2019ರ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ್ದರು. ಇದನ್ನು ದೇಶದಾದ್ಯಂತ ಮೆಟ್ರೊ ಮತ್ತು ಬಸ್‌ ಸೇವೆಗೆ ಬಳಸಬಹುದಾಗಿದೆ. ‘ಒಂದು ರಾಷ್ಟ್ರ, ಒಂದು ಕಾರ್ಡ್’ ಎಂದು ಹೇಳಲಾಗಿದ್ದ ಈ ಕಾರ್ಡ್ ಅನ್ನು ಬಳಕೆದಾರರು ಟೋಲ್ ಪಾವತಿ, ಪಾರ್ಕಿಂಗ್ ನಿಲುಗಡೆ ಶುಲ್ಕ, ಖಾತೆಯಿಂದ ಹಣವನ್ನು ಹಿಂತೆಗೆಯಲು ಬಳಸಬಹುದು ಎಂದು ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು