ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ವರ್ಷಗಳಲ್ಲಿ ಎನ್‌ಎಚ್‌ಎಐ ವಾರ್ಷಿಕ ಆದಾಯ ₹ 1.40 ಲಕ್ಷ ಕೋಟಿಗೆ ಹೆಚ್ಚಳ: ಗಡ್ಕರಿ

Last Updated 19 ಸೆಪ್ಟೆಂಬರ್ 2021, 6:21 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಎಚ್‌ಎಐ) ಮುಂದಿನ ಐದು ವರ್ಷಗಳ ಅವಧಿಯಲ್ಲಿ ಟೋಲ್‌ಗಳಿಂದ ಸಂಗ್ರಹವಾಗುವ ವಾರ್ಷಿಕ ಆದಾಯವನ್ನು ₹ 1.40 ಲಕ್ಷ ಕೋಟಿಗೆ ಹೆಚ್ಚಿಸಿಕೊಳ್ಳಲಿದೆ’ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಭಾನುವಾರ ಹೇಳಿದರು.

ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಈ ಮಾಹಿತಿ ನೀಡಿರುವ ಅವರು, ‘ದೇಶದಲ್ಲಿರುವ ಟೋಲ್‌ಗಳಿಂದ ಪ್ರಸ್ತುತ ವಾರ್ಷಿಕ ₹ 40,000 ಕೋಟಿ ಆದಾಯವಿದೆ’ ಎಂದರು.

ಆದಾಯ ವೃದ್ಧಿಗೆ ಸಂಬಂಧಿಸಿ, ಎನ್‌ಎಚ್‌ಎಐಯನ್ನು ಚಿನ್ನದ ಗಣಿಗೆ ಹೋಲಿಸಿದ ಅವರು, ‘ದೇಶದಲ್ಲಿ ವಿಶ್ವದರ್ಜೆ ಗುಣಮಟ್ಟದ ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಎನ್‌ಎಚ್‌ಎಐ ಯಶಸ್ವಿಯಾಗಿದೆ’ ಎಂದು ಹೇಳಿದರು.

ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇ ಕಾಮಗಾರಿಯನ್ನು ಪ್ರಸ್ತಾಪಿಸಿದ ಅವರು, ‘ಈ ಎಕ್ಸ್‌ಪ್ರೆಸ್‌ವೇ 2023ರಲ್ಲಿ ಬಳಕೆಗೆ ಸಿದ್ಧವಾಗಲಿದೆ. ಆಗ, ಈ ಎಕ್ಸ್‌ಪ್ರೆಸ್‌ವೇಯಲ್ಲಿನ ಟೋಲ್‌ಗಳಿಂದ ಪ್ರತಿ ತಿಂಗಳು ₹1,000 ದಿಂದ 1,500 ಕೋಟಿ ಆದಾಯ ಸಂಗ್ರಹವಾಗುವುದು’ ಎಂದು ಹೇಳಿದರು.

‘ಭಾರತಮಾಲಾ ಪರಿಯೋಜನಾ’ ಯೋಜನೆಯ ಮೊದಲ ಹಂತದಲ್ಲಿ ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೆ ನಿರ್ಮಿಸಲಾಗುತ್ತಿದೆ. ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಗುಜರಾತ್‌ ಮೂಲಕ ಸಾಗುವ ಈ ಎಕ್ಸ್‌ಪ್ರೆಸ್‌ವೆ ರಾಷ್ಟ್ರರಾಜಧಾನಿ ಹಾಗೂ ಮುಂಬೈ ನಡುವಿನ ಪ್ರಯಾಣದ ಅವಧಿಯನ್ನು 24 ಗಂಟೆಗಳಿಂದ 12 ಗಂಟೆಗೆ ಇಳಿಸುವ ನಿರೀಕ್ಷೆ ಹೊಂದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT