ನವದೆಹಲಿ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನದ ಸಚಿವ ಮಹೇಶ್ ಜೋಶಿ ಅವರ ಪುತ್ರ ರೋಹಿತ್ ಜೋಶಿಯನ್ನು ಬಂಧಿಸಲು ದೆಹಲಿ ಪೊಲೀಸರು ಜೈಪುರಕ್ಕೆ ಹೋಗಿದ್ದಾರೆ.

ಜೈಪುರ ಮೂಲದ 23 ವರ್ಷದ ಯುವತಿ ನೀಡಿದ ದೂರು ಆಧರಿಸಿ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ರೋಹಿತ್ ತಲೆ ಮರೆಸಿಕೊಂಡಿದ್ದಾರೆ.

'ನಮ್ಮ ತಂಡ ಜೈಪುರವನ್ನು ತಲುಪಿದೆ. ಅತ್ಯಾಚಾರ ಪ್ರಕರಣವೊಂದರಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಯನ್ನು ಹುಡುಕಲಾಗುತ್ತಿದೆ. ಆತ ಅಡಗಿಕೊಂಡಿರುವ ಸ್ಥಳವನ್ನು ಪತ್ತೆ ಬಂಧಿಸಲಾಗುವುದು' ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಒಂದು ವರ್ಷದಿಂದ ಹಲವು ಬಾರಿ ಅತ್ಯಾಚಾರ ನಡೆಸಿರುವುದಾಗಿ ಯುವತಿ ದೂರಿನಲ್ಲಿ ಹೇಳಿದ್ದಾರೆ.

ಆರಂಭದಲ್ಲಿ ದೆಹಲಿ ಪೊಲೀಸರು ಝಿರೋ ಎಫ್‌ಐಆರ್ ದಾಖಲಿಸಿದ್ದರು. ಬಳಿಕ ದೆಹಲಿಯ ಸದರ್ ಬಾಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದರಿಂದ ಕ್ರಮಬದ್ಧವಾಗಿ ಎಫ್‌ಐಆರ್ ದಾಖಲಿಸಲಾಗಿದೆ.

ಫೇಸ್‌ಬುಕ್ ಮೂಲಕ ಪರಿಚಿತನಾಗಿದ್ದ ರೋಹಿತ್ ಜೋಶಿಯನ್ನು ಜೈಪುರದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದೆ. ಕಳೆದ ವರ್ಷ ಜನವರಿ 8 ರಂದು ಸವಾಯಿ ಮಾಧೋಪುರ್‌ಗೆ ನನ್ನನ್ನು ಕರೆಯಿಸಿಕೊಂಡಿದ್ದ. ನನಗೆ ಕುಡಿಸಿ, ಮತ್ತಲ್ಲಿದ್ದ ವೇಳೆ ಬೆತ್ತಲೆ ಫೋಟೊ ಮತ್ತು ವಿಡಿಯೊ ಚಿತ್ರಿಸಿಕೊಂಡು ಮರುದಿನ ಅವುಗಳನ್ನು ತೋರಿಸಿ ಬೆದರಿಕೆ ಒಡ್ಡಿದ್ದ ಎಂದು ದೂರಿನಲ್ಲಿ ಯುವತಿ ಹೇಳಿದ್ದಾಳೆ.

ದೆಹಲಿಯಲ್ಲಿ ಒಂದು ಬಾರಿ ಭೇಟಿಯಾಗಿದ್ದಾಗ ಹೋಟೆಲ್‌ನಲ್ಲಿ ನಾವಿಬ್ಬರು ಗಂಡ-ಹೆಂಡತಿ ಎಂದು ದಾಖಲಿಸಿದ್ದ. ಮದುವೆಯಾಗುವುದಾಗಿ ಭರವಸೆಯನ್ನು ನೀಡಿದ್ದ. ನಂತರ ಕುಡಿದು ದೈಹಿಕ ಹಿಂಸೆ ನೀಡಿದ್ದ. ಅಶ್ಲೀಲ ವಿಡಿಯೊಗಳನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

2021ರ ಆಗಸ್ಟ್ 11ರಂದು ನಾನು ಗರ್ಭಿಣಿಯಾಗಿದ್ದೇನೆ ಎಂಬುದು ತಿಳಿದು ಬಂತು. ಮಗುವನ್ನು ತೆಗಿಸಲು ಒತ್ತಾಯ ಮಾಡಿದ. ಆದರೆ ತಾನು ಹಾಗೆ ಮಾಡಲಿಲ್ಲ ಎಂದು ದೂರಿನಲ್ಲಿ ಯುವತಿ ಹೇಳಿದ್ದಾರೆ.

ಝಿರೋ ಎಫ್‌ಐಆರ್ ಅನ್ನು ರಾಷ್ಟ್ರದ ಯಾವುದೇ ಭಾಗದಲ್ಲೂ ದಾಖಲು ಮಾಡಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.