ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಪ್ರಮಾಣ ಏರುಮುಖವಾಗಿದ್ದು, ಜೂನ್ 17ರಿಂದ ಜೂನ್ 24ರ ವರೆಗೆ ನಗರದಲ್ಲಿ ಕಂಟೇನ್‌ಮೆಂಟ್ ವಲಯಗಳ ಸಂಖ್ಯೆ 190ರಿಂದ 322ಕ್ಕೆ ಏರಿಕೆಯಾಗಿದೆ. ಅಂದರೆ ಶೇ 70ರಷ್ಟು ಏರಿಕೆಯಾಗಿದೆ.

ಕುಟುಂಬ, ನೆರೆಹೊರೆಯ ಸಂಪರ್ಕದಿಂದಲೇ ಹಲವು ಪ್ರಕರಣಗಳು ದೃಢಪಡುತ್ತಿವೆ. ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಒಂದು ಅಥವಾ ಎರಡು ಮನೆಗಳನ್ನು ಒಳಗೊಂಡ ಮೈಕ್ರೊ ಕಂಟೇನ್‌ಮೆಂಟ್ ವಲಯ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾನ್ಯವಾಗಿ ಮೂರಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾದ ಪ್ರದೇಶವನ್ನು ಕಂಟೇನ್‌ಮೆಂಟ್ ವಲಯವಾಗಿ ಮಾಡಲಾಗುತ್ತಿದೆ. ಈ ಪ್ರದೇಶಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಜೂನ್ 14ರ ಬಳಿಕ ಕೋವಿಡ್ ಸೋಂಕು ಪ್ರಮಾಣ ಏರಿಕೆಯಾಗುತ್ತಿದ್ದು, ನಿತ್ಯ ಸರಾಸರಿ 1000 ಪ್ರಕರಣಗಳು ಪತ್ತೆಯಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.