ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ದಶಕದಲ್ಲೇ ಕನಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆ

ಭಾರತೀಯ ಹವಾಮಾನ ಇಲಾಖೆ ಅಂಕಿ–ಅಂಶಗಳು
Last Updated 29 ನವೆಂಬರ್ 2020, 7:03 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರಾಸರಿ ಕನಿಷ್ಠ ತಾಪಮಾನ 10 ಡಿಗ್ರಿ ಇಳಿಯುವ ಸಾಧ್ಯತೆ ಇದ್ದು, ಇದು ಈ ದಶಕದಲ್ಲೇ ನವೆಂಬರ್‌ ತಿಂಗಳಲ್ಲಿ ದಾಖಲಾದ ಅತ್ಯಂತ ಕನಿಷ್ಠ ತಾಪಮಾನವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ(ಐಎಂಡಿ) ಅಂಕಿ ಅಂಶಗಳು ತಿಳಿಸಿವೆ.

ದೆಹಲಿಯಲ್ಲಿ ನವೆಂಬರ್‌ ತಿಂಗಳಲ್ಲಿ ಸರಾಸರಿ ತಾಪಮಾನ 12.9 ಡಿಗ್ರಿ ಸೆಲ್ಷಿಯಸ್ ಇತ್ತು. ನವೆಂಬರ್ 1 ರಿಂದ 29ರವರೆಗೆ, ನಗರದಲ್ಲಿ ಸರಾಸರಿ ಕನಿಷ್ಠ ತಾಪಮಾನ 10.3 ಡಿ.ಸೆ. ಇತ್ತು. ಇದು ಈ ದಶಕದಲ್ಲಿ ದಾಖಲಾದ ಕನಿಷ್ಠ ಸರಾಸರಿ ತಾಪಮಾನ ಎಂದು ಐಎಂಡಿ ದತ್ತಾಂಶಗಳು ಹೇಳುತ್ತಿವೆ.

ಕಳೆದ ವರ್ಷ ಇದೇ ತಿಂಗಳಲ್ಲಿ 15 ಡಿ.ಸೆ., 2018ರಲ್ಲಿ 13.4 ಡಿ.ಸೆ. ಮತ್ತು 2017 ಮತ್ತು 2016ರಲ್ಲಿ 12.8 ಡಿಗ್ರಿ ಸರಾಸರಿ ಕನಿಷ್ಠ ತಾಪಮಾನವಿತ್ತು.

ಭಾನುವಾರ ದೆಹಲಿಯಲ್ಲಿ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಷಿಯಸ್‌. ನವೆಂಬರ್ ತಿಂಗಳಲ್ಲಿ ಸತತ ಏಳನೇ ದಿನಗಳೂ 10 ಡಿಗ್ರಿಗಿಂತ ಕಡಿಮೆ ತಾಪಮಾನ ದಾಖಲಾಗಿದೆ. ಐಎಂಡಿ ಪ್ರಕಾರ ಸೋಮವಾರ ಕೂಡ ಇಷ್ಟೇ ಕನಿಷ್ಠ ತಾಪಮಾನ ಮುಂದುವರಿಯಲಿದೆ.

ದೆಹಲಿಯಲ್ಲಿ ನ. 23 ರಂದು 6.3 ಡಿಗ್ರಿ ಕನಿಷ್ಠ ತಾಪಮಾನವಿತ್ತು. ಇದು 2003ರ ನವೆಂಬರ್‌ನಿಂದ ಇಲ್ಲಿವರೆಗೆ ದಾಖಲಾಗಿರುವ ಅತ್ಯಂತ ಕನಿಷ್ಠ ತಾಪಮಾನ ಎನ್ನುತ್ತಾರೆ ಐಎಂಡಿ ವಲಯ ಹವಾಮಾನ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ.

ನವೆಂಬರ್ ತಿಂಗಳಲ್ಲಿ 16ನೇ ತಾರೀಖು ಹೊರತುಪಡಿಸಿ, ಉಳಿದ ಎಲ್ಲ ದಿನಗಳಲ್ಲೂ ಶೀತದ ವಾತಾವರಣವಿದ್ದು, ಸಾಮಾನ್ಯ ತಾಪಮಾನಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಷಿಯಸ್‌ನಷ್ಟು ಕಡಿಮೆ ದಾಖಲಾಗಿತ್ತು ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷದ ಅಕ್ಟೋಬರ್‌ನಲ್ಲಿ ಸರಾಸರಿ ಕನಿಷ್ಠ ತಾಪಮಾನ 17.2 ಡಿಗ್ರಿ ಸೆಲ್ಸಿಯಸ್ ಇತ್ತು. ಇದು 1962 ರ ನಂತರ ಈ ತಿಂಗಳಲ್ಲಿ ಇಷ್ಟು ಕನಿಷ್ಠ ತಾಪಮಾನ ದಾಖಲಾದ ಉದಾಹರಣೆ ಇರಲಿಲ್ಲ. ಆಗ 16.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT