ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ1ರಿಂದ 19 ವಿಧದ ಏಕಬಳಕೆ ಪ್ಲಾಸ್ಟಿಕ್‌ ವಸ್ತುಗಳಿಗೆ ನಿಷೇಧ

ದೆಹಲಿ ಸರ್ಕಾರದಿಂದ ಕಠಿಣ ಕ್ರಮ
Last Updated 21 ಜೂನ್ 2022, 13:39 IST
ಅಕ್ಷರ ಗಾತ್ರ

ನವದೆಹಲಿ: ಜುಲೈ 1ರಿಂದ 19 ವಿಧದ ಏಕಬಳಕೆ ಪ್ಲಾಸ್ಟಿಕ್‌ ವಸ್ತುಗಳನ್ನು ನಿಷೇಧಿಸಲು ದೆಹಲಿ ಪರಿಸರ ಇಲಾಖೆ ನಿರ್ಧರಿಸಿದೆ.

ಜೊತೆಗೆ ನಿಯಮ ಉಲ್ಲಂಘಿಸುವ ಪ್ಲಾಸ್ಟಿಕ್‌ ಉತ್ಪಾದನೆ, ವಿತರಣೆ, ದಾಸ್ತಾನು ಮತ್ತು ಮಾರಾಟ ಘಟಕಗಳನ್ನು ಮುಚ್ಚಲು ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಷೇಧಕ್ಕೊಳಗಾಗುವ 19 ವಿಧದ ಏಕಬಳಕೆ ಪ್ಲಾಸ್ಟಿಕ್‌ಗಳಲ್ಲಿ ಇಯರ್‌ಬಡ್‌, ಧ್ವಜ, ಕ್ಯಾಂಡಿ ಕಡ್ಡಿ, ಐಸ್‌ಕ್ರೀಮ್‌ ಕಡ್ಡಿ, ಥರ್ಮೋಕೊಲ್, ಪ್ಲೇಟ್‌, ಲೋಟ, ಫೋರ್ಕ್‌, ಚಮಚ, ಸ್ಟ್ರಾ, ಟ್ರೇ, ಚಾಕು, ಆಹ್ವಾನ ಪತ್ರಿಕೆ, ಸಿಗರೇಟ್ ಪ್ಯಾಕ್‌, 100 ಮೈಕ್ರಾನ್‌ ಒಳಗಿನ ಪ್ಲಾಸ್ಟಿಕ್‌ ಅಥವಾ ಪಿವಿಸಿ ಬ್ಯಾನರ್‌ಗಳು ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT