ಅನಿಲ್ ದೇಶ್‌ಮುಖ್ ಬಂಧನ ರಾಜಕೀಯ ಪ್ರೇರಿತ: ಸಚಿವ ನವಾಬ್ ಮಲ್ಲಿಕ್

ಮಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಬಂಧನ ರಾಜಕೀಯ ಪ್ರೇರಿತವಾಗಿದ್ದು ರಾಜ್ಯದ ಮಹಾ ವಿಕಾಸ್ ಅಘಾಡಿ ಸರ್ಕಾರದ ನಾಯಕರ ಘನತೆಗೆ ಧಕ್ಕೆ ತರುವ ಗುರಿ ಹೊಂದಿದೆ ಎಂದು ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಮಂಗಳವಾರ ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಸಚಿವರಾಗಿರುವ ಮಲಿಕ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ನಾಯಕರನ್ನು ಹೆದರಿಸುವುದನ್ನು ನಿಲ್ಲಿಸಬೇಕು ಎಂದು ಕಿಡಿಕಾರಿದರು.
‘ದೇಶ್‌ಮುಖ್ ಅವರನ್ನು ಬಂಧಿಸುವ ಇಡೀ ಪ್ರಕ್ರಿಯೆಯು ರಾಜಕೀಯ ಪ್ರೇರಿತವಾಗಿದೆ. ಇದು ಮಹಾ ವಿಕಾಸ್ ಅಘಾಡಿ (ಶಿವಸೇನೆ–ಎನ್‌ಸಿಪಿ–ಕಾಂಗ್ರೆಸ್ ಮೈತ್ರಿ ಕೂಟ) ನಾಯಕರನ್ನು ಬೆದರಿಸುವ ಗುರಿ ಹೊಂದಿದೆ’ ಎಂದು ಮಲಿಕ್ ಸುದ್ದಿಗಾರರಿಗೆ ಹೇಳಿದರು.
ರಾಜ್ಯ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದೇಶ್‌ಮುಖ್ ಅವರನ್ನು 12 ಗಂಟೆಗಳ ವಿಚಾರಣೆ ನಂತರ ಸೋಮವಾರ ತಡರಾತ್ರಿ ಬಂಧಿಸಿದೆ.
ದೇಶ್‌ಮುಖ್ ಅವರ ಬಂಧನವನ್ನು ಸ್ವಾಗತಿಸಿರುವ ಬಿಜೆಪಿಯ ಮಾಜಿ ಸಂಸದ ಕಿರಿತ್ ಸೋಮಯ್ಯ, ಕೇಂದ್ರ ತನಿಖಾ ಸಂಸ್ಥೆಯ ಮುಂದಿನ ಗುರಿ ಶಿವಸೇನೆಯ ಅನಿಲ್ ಪರಬ್ ಆಗಲಿದ್ದಾರೆ ಎಂದು ಹೇಳಿದರು.
‘ದೇಶ್‌ಮುಖ್ ಸಂಗ್ರಹಿಸಿದ್ದ ₹ 100 ಕೋಟಿ ಎಲ್ಲಿ ಹೋಯಿತು ಎಂದು ಈಗ ನಮಗೆ ತಿಳಿಯುತ್ತದೆ’ ಎಂದು ಸೋಮಯ್ಯ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.