ಮಂಗಳವಾರ, ಜನವರಿ 18, 2022
23 °C

ತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಫಲಿತಾಂಶ ಬಿಜೆಪಿ ಮೇಲಿನ ನಂಬಿಕೆಗೆ ಸಾಕ್ಷಿ: ಘೋಷ್

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ತ್ರಿಪುರಾ ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶವು ಜನರು ಬಿಜೆಪಿ ಮೇಲೆ ನಂಬಿಕೆ ಇಟ್ಟಿರುವುದನ್ನು ತೋರಿಸಿದೆ ಎಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಫ್ ಘೋಷ್ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಈಶಾನ್ಯ ರಾಜ್ಯದಲ್ಲಿ ಅಸ್ತಿತ್ವ ಕಂಡುಕೊಳ್ಳುವ ಕುರಿತ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಪೊಳ್ಳುತನದ ವಾದವನ್ನೂ ಫಲಿತಾಂಶ ಹುಸಿಗೊಳಿಸಿದೆ ಎಂದು ಹೇಳಿದ್ದಾರೆ.

ತ್ರಿಪುರಾದಲ್ಲಿ ಚುನಾವಣಾ ಪ್ರಚಾರಕ್ಕೆ ಟಿಎಂಸಿಯು ಜನರನ್ನು ಬಾಡಿಗೆಗೆ ಕರೆಸಿಕೊಂಡಿತ್ತು ಎಂದೂ ಅವರು ಟೀಕಿಸಿದ್ದಾರೆ.

ಓದಿ: ತ್ರಿಪುರಾ ಫಲಿತಾಂಶ: ಬಿಜೆಪಿಗೆ ಪ್ರಚಂಡ ಗೆಲುವು – ಟಿಎಂಸಿ, ಸಿಪಿಎಂಗೆ ಮುಖಭಂಗ

ತ್ರಿಪುರಾದಲ್ಲಿ ಖಾತೆ ತೆರೆಯಲೂ ಟಿಎಂಸಿಗೆ ಸಾಧ್ಯವಾಗದು. ತ್ರಿಪುರಾ ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶವು ನಿರೀಕ್ಷೆಯಂತೆಯೇ ಬಂದಿದೆ. ತ್ರಿಪುರಾದಲ್ಲಿ ಖಾತೆ ತೆರೆಯಲೂ ಸಾಧ್ಯವಾಗದ ಟಿಎಂಸಿ ಕೇವಲ ಸದ್ದು ಮಾಡಿದೆ ಅಷ್ಟೆ ಎಂದು ಘೋಷ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು