ಭಾನುವಾರ, ಏಪ್ರಿಲ್ 2, 2023
31 °C

ಕೋವಿಡ್‌: ವೈದ್ಯೆಯ ಶ್ವಾಸಕೋಶ ಕಸಿಗೆ ₹1.5 ಕೋಟಿ ಭರಿಸಲಿರುವ ಉ. ಪ್ರದೇಶ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಕೋವಿಡ್‌ನಿಂದ ಶ್ವಾಸಕೋಶದ ತೀವ್ರ ಸೋಂಕಿಗೆ ಒಳಗಾಗಿರುವ ರೆಸಿಡೆಂಟ್‌ ವೈದ್ಯೆಗೆ ಶ್ವಾಸಕೋಶ ಕಸಿ ಮಾಡಿಸಿಕೊಳ್ಳಲು ತಗಲುವ ₹1.5 ಕೋಟಿ ವೆಚ್ಚವನ್ನು ಭರಿಸಲು ಉತ್ತರ ಪ್ರದೇಶ ಮುಂದಾಗಿದೆ.

ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸ್ತ್ರೀರೋಗ ವಿಭಾಗದ ವೈದ್ಯೆ ಸುಮನ್‌ (31) ಅವರಿಗೆ ಕರ್ತವ್ಯದಲ್ಲಿದ್ದಾಗ ಏಪ್ರಿಲ್‌ 1ರಂದು ಕೋವಿಡ್‌ಗೆ ತಗುಲಿತ್ತು. ತೀವ್ರ ಸೋಂಕಿನಿಂದ ಅವರ ಶ್ವಾಸಕೋಶ ಬಹುತೇಕ ಹಾನಿಗೊಳಗಾಗಿದೆ. ಇದರ ನಡುವೆಯೇ ಅವರು ಮೇ 1ರಂದು ಹೆಣ್ಣು ಮಗುವಿಗೆ ಜನನ ನೀಡಿದ್ದು, ಮಗು ಆರೋಗ್ಯವಾಗಿದೆ.

ಅವರಿಗೆ ಹೈದರಾಬಾದ್‌ ಆಸ್ಪತ್ರೆಯೊಂದರಲ್ಲಿ ಶ್ವಾಸಕೋಶ ಕಸಿ ಮಾಡಿಸಬೇಕಿದೆ. ಅದಕ್ಕೆ ತಗಲುವ ₹1.5 ಕೋಟಿ ವೆಚ್ಚವನ್ನು ಭರಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಮ್ಮತಿಸಿದ್ದಾರೆ. ಹಣವನ್ನು ಚಿಕಿತ್ಸೆ ನೀಡುವ ಆಸ್ಪತ್ರೆಗೆ ಭರಿಸಲು ಮುಖ್ಯಮಂತ್ರಿ ನಿರ್ದೇಶಿಸಿದ್ದಾರೆ ಎಂದು ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಸೋನಿಯಾ ನಿತ್ಯಾನಂದ ತಿಳಿಸಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು