ಸೋಮವಾರ, ಆಗಸ್ಟ್ 2, 2021
23 °C

ರಾಜಸ್ಥಾನದ ಆದರ್ಶ ಸೊಸೈಟಿ ಹಗರಣ; ಇ.ಡಿಯಿಂದ ₹365 ಕೋಟಿ ಆಸ್ತಿ ವಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹಣ ದುರುಪಯೋಗ ಮಾಡಿಕೊಂಡು, ರಾಜಸ್ಥಾನದ 20 ಲಕ್ಷ ಜನರಿಗೆ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಆದರ್ಶ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಗೆ ಸೇರಿದ  ₹365 ಕೋಟಿ ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಶಪಡಿಸಿಕೊಂಡಿದೆ.

ಆದರ್ಶ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ (ಎಸಿಸಿಎಸ್ಎಲ್) ಮತ್ತು ಅದರ ಪ್ರವರ್ತಕರಾದ ಮುಖೇಶ್ ಮೋದಿ, ರಾಹುಲ್ ಮೋದಿ ಮತ್ತು ಇತರರ ವಿರುದ್ಧ ರಾಜಸ್ಥಾನ ಪೊಲೀಸ್ ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಒಜಿ) ದಾಖಲಿಸಿರುವ ಎಫ್‌ಐಆರ್ ಆಧರಿಸಿ, ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ.

‘ಸ್ವಾಧೀನಪಡಿಸಿಕೊಂಡಿರುವ ಸ್ವತ್ತುಗಳು ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯಲ್ಲಿರುವ ಕೃಷಿ, ವಸತಿ ಮತ್ತು ವಾಣಿಜ್ಯ ನಿವೇಶನ ರೂಪದಲ್ಲಿವೆ. ಜತೆಗೆ, ನಿಶ್ಚಿತ ಠೇವಣಿ ಮತ್ತು ಬ್ಯಾಂಕ್‌  ಖಾತೆಗಳಲ್ಲಿದೆ‘ ಎಂದು ಜಾರಿ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು