ಭಾನುವಾರ, ಜನವರಿ 24, 2021
27 °C

ಇ–ಟೆಂಡರ್ ಅಕ್ರಮ ಪ್ರಕರಣ: ವಿವಿಧೆಡೆ ಇ.ಡಿ ದಾಳಿ, ತಪಾಸಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಧ್ಯಪ್ರದೇಶದ ₹ 3000 ಕೋಟಿ ಮೊತ್ತದ ಇ–ಟೆಂಡರಿಂಗ್ ಟಿಕೆಟ್‌ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಗುರುವಾರ ಭೋಪಾಲ್‌, ಹೈದರಾಬಾದ್‌ ಮತ್ತು ಬೆಂಗಳೂರಿನಲ್ಲಿ ದಾಳಿ ನಡೆಸಿದ್ದಾರೆ.

ಹಣ ಅಕ್ರಮ ವರ್ಗಾವಣೆಗೆ ಇ.ಡಿ ಅಧಿಕಾರಿಗಳು ಈ ವಾರ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ಪ್ರಕರಣ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭೋಪಾಲ್, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ದಾಳಿ ನಡದಿದ್ದು, ಕನಿಷ್ಠ 15 ಕಡೆ ತಪಾಸಣೆ ನಡೆಯಿತು. ಈ ತಾಣಗಳಲ್ಲಿ ಮಧ್ಯಪ್ರದೇಶ ಮಾಜಿ ಮುಖ್ಯ ಕಾರ್ಯದರ್ಶಿ ಅವರಿಗೆ ಸೇರಿದ ತಾಣವೂ ಸೇರಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರದ ಇ–ಟೆಂಡರ್ ಪೋರ್ಟಲ್‌ ಅನ್ನು ಕಳೆದ ವರ್ಷ ಹ್ಯಾಕ್‌ ಮಾಡಿ, ತಿರುಚುವ ಮೂಲಕ ಗುತ್ತಿಗೆಗಳನ್ನು ಪಡೆಯಲಾಗಿದೆ ಎಂಬ ಪ್ರಕರಣ ಸಂಬಂಧ ಇ.ಡಿ ಕಳೆದ ವರ್ಷ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು.

ಪ್ರಕರಣ ಸಂಬಂಧ ಇ.ಡಿ ಇದುವರೆಗೂ ಏಳು ಕಂಪನಿಗಳ ಪ್ರತಿನಿಧಿಗಳು, ಐದು ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಕೆಲ ರಾಜಕಾರಣಿಗಳ ವಿರುದ್ಧ ಮೊಕದ್ದಮೆಯನ್ನು ದಾಖಲಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು