ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿ ವಿಜಯ್ ಮಲ್ಯ ಒಡೆತನದ ₹14 ಕೋಟಿ ಮೌಲ್ಯದ ಆಸ್ತಿ ಜಪ್ತಿ

Last Updated 4 ಡಿಸೆಂಬರ್ 2020, 14:58 IST
ಅಕ್ಷರ ಗಾತ್ರ

ನವದೆಹಲಿ: ಅಕ್ರಮ ಹಣ ವರ್ಗಾವಣೆ ನಿಗ್ರಹ ಕಾನೂನಿನಡಿ ಉದ್ಯಮಿ ವಿಜಯ್ ಮಲ್ಯ ಒಡೆತನದ ಫ್ರಾನ್ಸ್‌ನಲ್ಲಿದ್ದ ₹14 ಕೋಟಿ ಮೌಲ್ಯದ ಆಸ್ತಿಯನ್ನ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

ಜಾರಿ ನಿರ್ದೇಶನಾಲಯದ ಮನವಿ ಮೇರೆಗೆ ಫ್ರಾನ್ಸ್‌ನ ಅಧಿಕಾರಿಗಳು ಈ ಜಪ್ತಿ ಮಾಡಿದ್ದಾರೆ. ಜಪ್ತಿಯಾಗಿರುವ ಆಸ್ತಿ ಫ್ರಾನ್ಸ್‌ನ 32 ಅವೆನ್ಯೂ ಪೋಚ್‌ನಲ್ಲಿದೆ.

ಜಪ್ತಿ ಮಾಡಲಾದ ಆಸ್ತಿ ಮೌಲ್ಯ 1.6 ಮಿಲಿಯನ್ ಯೂರೋ ಅಂದರೆ ಭಾರತೀಯ ರೂಪಾಯಿಯಲ್ಲಿ ₹14 ಕೋಟಿಯಷ್ಟಾಗುತ್ತದೆ ಎಂದು ಕೇಂದ್ರೀಯ ತನಿಖಾ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ರಮ ಹಣ ವರ್ಗಾವಣೆ ನಿಗ್ರಹ ಕಾಯ್ದೆಯಡಿ ಈ ತನಿಖೆ ನಡೆದಿದ್ದು, ಫ್ರಾನ್ಸ್‌ನಲ್ಲಿ ಆಸ್ತಿ ಮಾಡಲು ಕಿಂಗ್ ಫಿಷರ್ ಏರ್‌ಲೈನ್ ಖಾತೆಯಿಂದ ಭಾರಿ ಪ್ರಮಾಣದ ಹಣ ವರ್ಗಾವಣೆಯಾಗಿದೆ ಎಂದು ತಿಳಿಸಿದೆ.

ಸದ್ಯ, ನಿಷ್ಕ್ರಿಯಗೊಂಡಿರುವ ಕಿಂಗ್ ಫಿಷರ್ ಏರ್‌ಲೈನ್ಸ್ ಸಂಸ್ಥೆಯ ₹9000 ಕೋಟಿ ಸಾಲದ ಸುಸ್ತಿದಾರನಾಗಿರುವ ವಿಜಯ್ ಮಲ್ಯ, 2016ರಿಂದ ಬ್ರಿಟನ್ನಿನಲ್ಲೇ ನೆಲೆಸಿದ್ದಾರೆ. 2017ರಲ್ಲೇ
ಸ್ಕಾಟ್‌ಲ್ಯಾಂಡ್ ಯಾರ್ಡ್ ನ್ಯಾಯಾಲಯದಿಂದ ಹಸ್ತಾಂತರ ವಾರೆಂಟ್ ಜಾರಿಯಾಗಿದ್ದು, ವಿಜಯ್ ಮಲ್ಯ ಜಾಮೀನು ಪಡೆದಿದ್ದಾರೆ.

ಬ್ರಿಟನ್ನಿನ ನ್ಯಾಯಾಂಗ ಮತ್ತು ಗೌಪ್ಯ ರೀತಿಯ ಪ್ರತ್ಯೇಕ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ವಿಜಯ್ ಮಲ್ಯ ಅವರನ್ನ ಭಾರತಕ್ಕೆ ಹಸ್ತಾಂತರ ಸಾಧ್ಯವಿಲ್ಲ ಎಂದು ಅಕ್ಟೋಬರ್ 5ರಂದು ಕೇಂದ್ರ ಸರ್ಕಾರ ಸುಪ್ರೀ ಕೋರ್ಟ್ಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT