ನಾಗ್ಪುರ (ಪಿಟಿಐ): ವರ್ಣ, ಜಾತಿ.. ಹೀಗೆ ತಾರತಮ್ಯಕ್ಕೆ ಅವಕಾಶ ನೀಡುವ ಪ್ರತಿಯೊಂದು ವ್ಯವಸ್ಥೆ ಸಹ ಸಮಾಜದಿಂದ ತೊಲಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ದಳದ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಇಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜಾತಿ ವ್ಯವಸ್ಥೆಗೆ ಸದ್ಯ ಯಾವುದೇ ಪ್ರಸ್ತುತತೆ ಇಲ್ಲ. ಸಾಮಾಜಿಕ ಸಮಾನತೆ ಭಾರತೀಯ ಸಂಪ್ರದಾಯದ ಭಾಗವಾಗಿತ್ತು. ಇದನ್ನು ಮರೆತ ಪರಿಣಾಮ ಸಮಾಜದ ಮೇಲೆ ದುಷ್ಪರಿಣಾಮ ಉಂಟಾಗಿದೆ. ಮೂಲತಃವರ್ಣ ಮತ್ತು ಜಾತಿ ವ್ಯವಸ್ಥೆ ತಾರತಮ್ಯವನ್ನು ಹೊಂದಿಲ್ಲ ಎಂದು ಹೇಳಿದರು.

‘ಈಗಲೂ ಈ ವರ್ಣ ಮತ್ತು ಜಾತಿ ಬಗ್ಗೆ ಯಾರಾದರೂ ಕೇಳಿದರೆ, ‘ಅದು ಭೂತಕಾಲ, ಮರೆತುಬಿಡೋಣ’ ಎಂದು ಉತ್ತರಿಸಬೇಕು. ತಾರತಮ್ಯ ಮಾಡುವ ಎಲ್ಲಾ ವ್ಯವಸ್ಥೆಯೂ ತೊಲಗಬೇಕು. ಈ ಹಿಂದಿನ ಪೀಳಿಗೆ ಎಲ್ಲೆಡೆ ತಪ್ಪು ಮಾಡಿದೆ, ಅದಕ್ಕೆ ಭಾರತ ಸಹ ಹೊರತಾಗಿಲ್ಲ. ಅಂತಹ ತಪ್ಪುಗಳನ್ನು ಒಪ್ಪಿಕೊಳ್ಳುವುದಲ್ಲಿ ಸಮಸ್ಯೆ ಇಲ್ಲ’ ಎಂದರು.

ರತನ್ ಟಾಟಾಗೆ ಸೇವಾ ರತ್ನ ಪ್ರಶಸ್ತಿ (ನವದೆಹಲಿ ವರದಿ):

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಸೇವಾ ಭಾರತಿಯುಉದ್ಯಮಿ ರತನ್ ಟಾಟಾ ಮತ್ತುಚಲಸಾನಿ ಬಾಬು ರಾಜೇಂದ್ರ ಪ್ರಸಾದ್ ಅವರಿಗೆ ‘ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತು.ಇವರ ಪರೋಪಕಾರ ಗುಣವನ್ನು ಗುರುತಿಸಿ ಈ ಗೌರವ ನೀಡಲಾಯಿತು. ಇವರ ಜತೆಗೆ ಇತರ 24 ಮಂದಿಗೂ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರತನ್ ಟಾಟಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.