ಮಂಗಳವಾರ, ಜನವರಿ 18, 2022
15 °C

ಜಾರ್ಖಂಡ್: ಇಬ್ಬರು ಪೊಲೀಸರ ಕತ್ತು ಸೀಳಿದ ನಕ್ಸಲರು, ಮಾಜಿ ಶಾಸಕ ಪಾರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೈಬಾಸಾ, ಜಾರ್ಖಂಡ್: ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಮಂಗಳವಾರ ನಕ್ಸಲರು ದಾಳಿ ನಡೆಸಿದ್ದು, ಬಿಜೆಪಿಯ ಮಾಜಿ ಶಾಸಕ ಗುರುಚರಣ್ ನಾಯಕ್ ಪಾರಾಗಿದ್ದಾರೆ.

ಆದರೆ, ಶಾಸಕರ ಅಂಗರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಕಾನ್‌ಸ್ಟೆಬಲ್‌ಗಳ ಕತ್ತನ್ನು ಸೀಳಿರುವ ನಕ್ಸಲರು, ಮೂರು ಎಕೆ–47 ರೈಫಲ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ನಿಷೇಧಿತ ಸಂಘಟನೆ ಸಿಪಿಐಗೆ(ಮಾವೊವಾದಿ) ಸೇರಿದ ಸದಸ್ಯರು ಈ ದಾಳಿ ನಡೆಸಿದ್ದಾರೆ. ಗೋಯಿಕೇರಾ ಪೊಲೀಸ್‌ ಠಾಣೆ ವ್ಯಾಪ್ತಿಯ ಝೀಲ್‌ರುವಾ ಗ್ರಾಮದಲ್ಲಿ ಫುಟ್ಬಾಲ್ ಪಂದ್ಯ ನಡೆಯುತ್ತಿತ್ತು. ಮಾಜಿ ಶಾಸಕ ನಾಯಕ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದರು. ಪಂದ್ಯ ಮುಗಿದ ನಂತರ, ವೀಕ್ಷಕರ ನಡುವೆ ಕುಳಿತಿದ್ದ ನಕ್ಸಲರು ಏಕಾಏಕಿ ದಾಳಿ ನಡೆಸಿದ್ದಾರೆ’ ಎಂದು ಚಕ್ರಧರಪುರದ ಪೊಲೀಸ್‌ ಅಧಿಕಾರಿ ದಿಲೀಪ್‌ ಖಾಲ್ಖೊ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು