ಮಂಗಳವಾರ, ಮೇ 11, 2021
24 °C
ಮಾಜಿ ಸಿಐಸಿ ಶೈಲೇಶ್‌ ಗಾಂಧಿ ಸಲಹೆ

ಕೋರ್ಟ್‌ಗಳಲ್ಲಿ ವರ್ಚುವಲ್ ವಿಚಾರಣೆ ಕಾಯಂ ಆಗಲಿ: ಮಾಜಿ ಸಿಐಸಿ ಶೈಲೇಶ್‌ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವರ್ಚುವಲ್‌ ವಿಚಾರಣೆಯನ್ನು ನ್ಯಾಯಾಂಗದ ಕಾಯಂ ವ್ಯವಸ್ಥೆಯನ್ನಾಗಿ ಮಾಡಬೇಕು ಎಂದು ಕೇಂದ್ರೀಯ ಮಾಹಿತಿ ಆಯೋಗದ ಮಾಜಿ ಆಯುಕ್ತ ಶೈಲೇಶ್‌ ಗಾಂಧಿ ಹೇಳಿದ್ದಾರೆ.

ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ‘ಸುಪ್ರೀಂಕೋರ್ಟ್‌ ಇ–ಕಮಿಟಿ’ಗೆ ಸಲ್ಲಿಸಿರುವ ಮನವಿಪತ್ರದಲ್ಲಿ ಅವರು ಈ ಸಲಹೆ ಮುಂದಿಟ್ಟಿದ್ದಾರೆ.

‘2005ರಲ್ಲಿ ಅಸ್ತಿತ್ವಕ್ಕೆ ಬಂದಿರುವ  ‘ಸುಪ್ರೀಂಕೋರ್ಟ್‌ ಇ–ಕಮಿಟಿ’,  ಎಲ್ಲ ಹಂತಗಳ ಕೋರ್ಟ್‌ಗಳಲ್ಲಿ ಐಟಿ ಆಧಾರಿತ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಹೇಳಿತ್ತು. ಆದರೆ, ಈ ನಿಟ್ಟಿನಲ್ಲಿ ನಿರೀಕ್ಷಿತ ಸಾಧನೆ ಆಗಿಲ್ಲ’ ಎಂದು ಅವರು ಹೇಳಿದ್ದಾರೆ.

‘ದೇಶದಲ್ಲಿ 20,000 ಕೋರ್ಟ್‌ಗಳಿವೆ ಎಂಬ ಅಂದಾಜಿದೆ. ಪ್ರತಿ ಕೋರ್ಟ್‌ನಲ್ಲಿ ₹ 10 ಲಕ್ಷ ವೆಚ್ಚದಲ್ಲಿ ಐಟಿ ಆಧಾರಿತ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆದರೆ, ಕೋವಿಡ್‌ ಪಿಡುಗಿನ ಅವಧಿಯಲ್ಲಿ ಆನ್‌ಲೈನ್‌ ಮೂಲಕ ವಿಚಾರಣೆಯನ್ನು ‍ಪ‍ರಿಣಾಮಕಾರಿಯಾಗಿ ನಡೆಸಲು ಬಹುತೇಕ ಕೋರ್ಟ್‌ಗಳು ವಿಫಲವಾಗಿವೆ’ ಎಂದೂ ಅವರು ಹೇಳಿದ್ದಾರೆ.

ಆಯೋಗದ ಆಯುಕ್ತರಾಗಿದ್ದಾಗ ಗಾಂಧಿ ಅವರು ಆಯೋಗದಲ್ಲಿ ಕಾಗದ ರಹಿತ ವ್ಯವಸ್ಥೆಯನ್ನು ಜಾರಿಗೊಳಿಸಲು ಶ್ರಮಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು