ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡ: ರೈನಿ ಗ್ರಾಮ ಸ್ಥಳಾಂತರಕ್ಕೆ ತಜ್ಞರ ಶಿಫಾರಸು

Last Updated 8 ಆಗಸ್ಟ್ 2021, 10:11 IST
ಅಕ್ಷರ ಗಾತ್ರ

ಡೆಹ್ರಾಡೂನ್‌: ಸಂಭಾವ್ಯ ಪ್ರಕೃತಿ ವಿಕೋಪಗಳಿಂದಾಗುವ ಹಾನಿ ತಡೆಯಲು, ಉತ್ತರಾಖಂಡದ ಚಮೋಲಿ ಜಿಲ್ಲೆಯ ರೈನಿ ಗ್ರಾಮದ ನಿವಾಸಿಗಳನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.

ಕಳೆದ ಫೆಬ್ರುವರಿಯಲ್ಲಿ ಸಂಭವಿಸಿದ್ದ ಭಾರಿ ಮಳೆ, ಭೂಕುಸಿತದ ಪರಿಣಾಮ ಗ್ರಾಮಸ್ಥರು ಭಾರಿ ಸಂಕಷ್ಟ ಎದುರಿಸಿದ್ದರು. ಗ್ರಾಮದ ಬಳಿಯ ರಿಷಿ ಗಂಗಾ ನದಿಯಲ್ಲಿ ನಿರ್ಮಿಸಲಾಗಿದ್ದ ಜಲವಿದ್ಯುತ್‌ ಉತ್ಪಾದನೆ ಸ್ಥಾವರ ಸಂಪೂರ್ಣ ಕೊಚ್ಚಿಕೊಂಡು ಹೋಗಿತ್ತು. ಇದು ಸೇರಿದಂತೆ ಆಗಾಗ ಸಂಭವಿಸಿದ ನೈಸರ್ಗಿಕ ವಿಕೋಪಗಳು ಗ್ರಾಮಸ್ಥರ ನೆಮ್ಮದಿಯನ್ನೇ ಕಸಿದಿವೆ.

ರಿಷಿ ಗಂಗಾ ಮತ್ತು ಧವಳಿಗಂಗಾ ನದಿಗಳ ಸಂಗಮದಲ್ಲಿ ಈ ಗ್ರಾಮವಿದ್ದು, ಇಳಿಜಾರು ಪ್ರದೇಶಗಳೇ ಹೆಚ್ಚಿವೆ. ಹೀಗಾಗಿ ಅವಘಡಗಳು ಸಂಭವಿಸಿದಂತೆ ಕ್ರಮ ಕೈಗೊಳ್ಳಬೇಕು ಇಲ್ಲವೇ ಇಡೀ ಗ್ರಾಮವನ್ನೇ ಸ್ಥಳಾಂತರಿಸಬೇಕು ಎಂದು ಉತ್ತರಾಖಂಡ ವಿಪತ್ತು ಪುನಶ್ಚೇತನ ಕಾರ್ಯಕ್ರಮದಡಿ (ಯುಡಿಆರ್‌ಐ) ಸಲ್ಲಿಸಲಾಗಿರುವ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT