ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿನಲ್ಲಿ ಪಕ್ಷಪಾತಿ ಧೋರಣೆ: ಕಾಂಗ್ರೆಸ್‌

Last Updated 12 ಫೆಬ್ರವರಿ 2023, 14:28 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ನಾಯಕರ ಭಾಷಣದ ಕೆಲವು ಅಂಶಗಳನ್ನು ಕಡತದಿಂದ ತೆಗೆದು ಹಾಕಿರುವುದು ಮತ್ತು ರಾಜ್ಯಸಭಾ ಸದಸ್ಯರ ಅಮಾನತುಗೊಳಿಸುವಿಕೆಯಲ್ಲಿ ನಿರ್ಲಜ್ಜ ಪಕ್ಷಪಾತಿ ಧೋರಣೆ ಎದ್ದು ಕಾಣುತ್ತಿದೆ. ಬಿಜೆಪಿ ನೇತೃತ್ವದ ಸರ್ಕಾರವು ಸಂಸತ್ತಿನಲ್ಲಿ ಸರ್ವಾಧಿಕಾರಿಯಂತೆ ಪ್ರಾಬಲ್ಯ ಸಾಧಿಸಲು ಬಯಸಿದೆ ಎಂದು ಕಾಂಗ್ರೆಸ್ ಭಾನುವಾರ ಗಂಭೀರ ಆರೋಪ ಮಾಡಿದೆ.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಹಿರಿಯ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ, ‘ಸಂಸತ್ತಿನ ಅಧಿವೇಶನವು ಸಾಮರಸ್ಯ, ಸಹಕಾರ ಮತ್ತು ಒಮ್ಮತದಿಂದ ನಡೆಯಬೇಕು ಎಂದು ಬಿಜೆಪಿ ಬಯಸುವುದಿಲ್ಲ. ಗದ್ದಲ, ಗೊಂದಲ ಮತ್ತು ಸಂಘರ್ಷಗಳ ನಡುವೆ ನಡೆಯಬೇಕೆಂದು ಬಯಸುತ್ತಿದೆ’ ಎಂದರು.

‘ಬಿಜೆಪಿಯ ನಿರಂಕುಶ ಮತ್ತು ಸರ್ವಾಧಿಕಾರಿ ಧೋರಣೆಯು ಸಂಸತ್ತಿನ ಪ್ರತಿ ಸದನದಲ್ಲೂ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಕಡತದಿಂದ ತೆಗೆಯಲಾಗಿದೆ. ರಾಜ್ಯಸಭೆ ಸದಸ್ಯೆ ರಜನಿ ಪಾಟೀಲ್ ಅವರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ. ಆದರೆ ಅವರ ಭಾಷಣಗಳಲ್ಲಿ ಅಸಂಸದೀಯ ಭಾಷೆ, ಕೆಟ್ಟ ನುಡಿಗಳು, ಆಕ್ಷೇಪಾರ್ಹ ಅಥವಾ ನಿಂದನಾತ್ಮಕ ಅಂಶಗಳೇನೂ ಇರಲಿಲ್ಲ’ ಎಂದು ಅವರು ಸಮರ್ಥಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT