ಶನಿವಾರ, ಮೇ 21, 2022
28 °C

ಎನ್‌ಸಿಬಿ ವಿರುದ್ಧ ಸುಲಿಗೆ ಆರೋಪ: ಸೈಲ್‌ರಿಂದ ಹೇಳಿಕೆ ದಾಖಲಿಸಿಕೊಂಡ ಪೊಲೀಸರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮುಂಬೈನ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಸೇವನೆ ಪ್ರಕರಣದಿಂದ ಆರ್ಯನ್‌ ಖಾನ್ ಕೈಬಿಡಲು ಎನ್‌ಸಿಬಿ ಅಧಿಕಾರಿಗಳು ₹25 ಕೋಟಿಗೆ ಬೇಡಿಕೆ ಇರಿಸಿದ್ದಾಗಿ ಆರೋಪಿಸಿದ್ದ ಸ್ವತಂತ್ರ ಸಾಕ್ಷಿದಾರ ಪ್ರಭಾಕರ ಸೈಲ್ ಅವರಿಂದ ಮುಂಬೈ ಪೊಲೀಸರು ಎಂಟು ಗಂಟೆಗಳ ಕಾಲ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಮಂಗಳವಾರ ಸಂಜೆ ಪ್ರಭಾಕರ್ ಅವರು ನಗರ ಪೊಲೀಸರ ಮುಂದೆ ಹಾಜರಾಗಿದ್ದರು. ಅವರಿಂದ ರಾತ್ರಿಯಿಂದಲೇ ಪೊಲೀಸರು ಹೇಳಿಕೆ ದಾಖಲಿಸುವ ಪ್ರಕ್ರಿಯೆ ಆರಂಭಿಸಿದ್ದು, ಬುಧವಾರ ಮುಂಜಾನೆ 3 ಗಂಟೆ ಸುಮಾರಿಗೆ ಪೂರ್ಣಗೊಂಡಿತು ಎಂದು ಅವರು ಹೇಳಿದರು.‘

ಹೇಳಿಕೆ ನೀಡಿದ ನಂತರ ಸೈಲ್ ಅವರು, ಬುಧವಾರ ಮುಂಜಾನೆ ಅಜಾದ್ ಮೈದಾನದಲ್ಲಿರುವ ಸಹಾಯ ಪೊಲೀಸ್ ಅಯುಕ್ತರ ಕಚೇರಿಗೆ ತೆರಳಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಿಟಿ ಪೊಲೀಸರು ಅವರಿಗೆ ಬಿಗಿ ಭದ್ರತೆ ಒದಗಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು