ಫ್ಯಾಕ್ಟ್ ಚೆಕ್: ಸಿಬಿಎಸ್‌ಇ ಪರೀಕ್ಷೆ ವೇಳಾಪಟ್ಟಿ

ಸಿಬಿಎಸ್‌ಇ ಪಠ್ಯಕ್ರಮದ 10 ಹಾಗೂ 12ನೇ ತರಗತಿಗಳ ಪರೀಕ್ಷಾ ವೇಳಾಪಟ್ಟಿಯೊಂದು ವಾಟ್ಸ್‌ಆ್ಯಪ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಮೇ 4ರಿಂದ ಜೂನ್ 10ರವರೆಗಿನ ಅವಧಿಯಲ್ಲಿ ನಡೆಯಲಿದೆ ಎನ್ನಲಾದ ಪರೀಕ್ಷೆಗಳ ವಿವರವನ್ನು ನಮೂದಿಸಲಾಗಿದೆ. ಮಂಡಳಿಯೇ ಈ ವೇಳಾಪಟ್ಟಿಯನ್ನು ಪ್ರಕಟಿಸಿದೆ ಎಂಬ ಮಾಹಿತಿಯೂ ಅದರಲ್ಲಿ ಇದೆ.
ಆದರೆ, ಸಿಬಿಎಸ್‌ಇ ಪರೀಕ್ಷೆಗಳು ಮೇ 4ರಿಂದ ಜೂನ್ 10ರೊಳಗಿನ ಅವಧಿಯಲ್ಲಿ ನಡೆಯಲಿವೆ ಎಂದು ಮಂಡಳಿ ಹೇಳಿರುವುದು ನಿಜವಾದರೂ ಆ ಕುರಿತ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪಟ್ಟಿಯು ಮಂಡಳಿಯು ಬಿಡುಗಡೆ ಮಾಡಿದ್ದಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.