ಶನಿವಾರ, ನವೆಂಬರ್ 28, 2020
18 °C

ತುಂಬಾ ಸಂತೋಷವಾಗಿದೆ: ಕಮಲಾ ಚಿಕ್ಕಮ್ಮ

PTI Updated:

ಅಕ್ಷರ ಗಾತ್ರ : | |

ಚೆನ್ನೈ: ‘ತುಂಬಾ ಸಂತೋಷವಾಗಿದೆ. ಪ್ರಮಾಣ ವಚನ ಸಮಾರಂಭಕ್ಕೆ ಬಹುಶಃ ನಾವೆಲ್ಲಾ ಅಮೆರಿಕಕ್ಕೆ ಹೋಗುತ್ತೇವೆ’ ಎಂದು ಅಮೆರಿಕ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್‌ ಅವರು ಆಯ್ಕೆಯಾದ ಬಳಿಕ ಇಲ್ಲಿರುವ ಅವರ ಚಿಕ್ಕಮ್ಮ ಡಾ. ಸರಳಾ ಗೋಪಾಲನ್‌ ಪ್ರತಿಕ್ರಿಯಿಸಿದ್ದಾರೆ.

‘ಖಂಡಿತವಾಗಿ ನಮಗೆ ಸಂತಸವಾಗಿದೆ. ಏನು ಸಾಧಿಸಬೇಕು ಎಂದುಕೊಂಡಿದ್ದಳೊ ಅದನ್ನು ಕಮಲಾ ಮಾಡಿದ್ದಾಳೆ. ಅಲ್ಲದೆ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗುವ ಮೂಲಕ ಇತಿಹಾಸವನ್ನೂ ನಿರ್ಮಿಸಿದ್ದಾಳೆ‘ ಎಂದು ಅವರು ‘ಪ್ರಜಾವಾಣಿ‘ ಜತೆ ಸಂತೋಷ ಹಂಚಿಕೊಂಡಿದ್ದಾರೆ.

‘ಫಲಿತಾಂಶ ಬರುವಾಗ ಶನಿವಾರ ರಾತ್ರಿ ಬಹಳ ತಡವಾಗಿತ್ತು. ನಾನು ಅದಕ್ಕಾಗಿ ಕಾಯುತ್ತಿದ್ದೆ. ಆಕೆಗೆ ಸಮಯ ಸಿಕ್ಕಾಗ ಖಂಡಿತ ನನಗೆ ಫೋನ್‌ ಮಾಡುತ್ತಾಳೆ‘ ಎಂದೂ ಅವರು ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು