ತಿರುವನಂತಪುರಂ: ಆನ್‌ಲೈನ್‌ನಲ್ಲಿ ಎಚ್ಚರದಿಂದ ವ್ಯವಹರಿಸಿ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ನಾಗರಿಕರಿಗೆಸಲಹೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಹೊತ್ತಲ್ಲಿ ಡಿಜಿಟಲ್ ಹಣ ವ್ಯವಹಾರಗಳನ್ನು ಜನರು ಹೆಚ್ಚಾಗಿ ಬಳಸುವುದರಿಂದ ಆನ್‌ಲೈನ್ ವಂಚನೆ ಪ್ರಕರಣಗಳು ಜಾಸ್ತಿ ಆಗಿದೆಎಂದು ಅವರು ಹೇಳಿದ್ದಾರೆ.

ಶುಕ್ರವಾರ ಕೇರಳ ಪೊಲೀಸ್ ಮತ್ತುಸೊಸೈಟಿ ಫಾರ್ ದಿ ಪೊಲೀಸಿಂಗ್ ಆಫ್ ಸೈಬರ್‌ಸ್ಪೇಸ್ ಆ್ಯಂಡ್ ಇನ್ಫಾರ್ಮೇಷನ್ ಸೆಕ್ಯೂರಿಟಿ ರಿಸರ್ಚ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಸೈಬರ್ ಸೆಕ್ಯುರಿಟಿ ವರ್ಚುವಲಿ ಅಟ್ ದಿ COCONXIII-2020, ಮಾಹಿತಿ ಸುರಕ್ಷೆ ಮತ್ತು ಹ್ಯಾಕಿಂಗ್ ಸಮ್ಮೇಳನದಲ್ಲಿ ಡೊಭಾಲ್ಉಪನ್ಯಾಸ ನೀಡಿದ್ದಾರೆ.

ಕೋವಿಡ್ ಸಾಂಕ್ರಾಮಿಕವು ಕೆಲಸದ ವಾತಾವರಣದಲ್ಲಿ ಬದಲಾವಣೆಯನ್ನು ತಂದಿದೆ. ಕೈಯಲ್ಲಿ ನಗದು ನೀಡುವ ಬದಲು ಜನರು ಡಿಜಿಟಲ್ ಪೇಮೆಂಟ್ ಫ್ಲಾಟ್‌ಫಾರಂಗಳನ್ನು ಬಳಸುತ್ತಾರೆ. ಆನ್‌ಲೈನ್‌ನಲ್ಲಿ ಮಾಹಿತಿ ಹಂಚಲ್ಪಡುತ್ತದೆ. ಅದೇ ವೇಳೆ ಸಾಮಾಜಿಕ ತಾಣದಲ್ಲಿಯೂ ಸಕ್ರಿಯವಾಗಿರುವವರ ಸಂಖ್ಯೆ ಹೆಚ್ಚಿದೆ.ನಾವು ಒಂದು ಹಂತಕ್ಕೆ ನಮ್ಮ ಆನ್‌ಲೈನ್ ವ್ಯವಹಾರಗಳನ್ನು ಸುರಕ್ಷಿತವಾಗಿ ನಿರ್ವಹಿಸಿದರೂ ವಂಚನೆ ನಡೆಸುವವರು ಅಲ್ಲಿಯೂ ಬೇರೊಂದು ಉಪಾಯಗಳನ್ನು ಕಂಡುಕೊಳ್ಳುತ್ತಾರೆ ಎಂದಿದ್ದಾರೆ ಡೊಭಾಲ್.

ಸೈಬರ್ ಹೈಜೀನ್ ಬಗ್ಗೆ ಜಾಗೃತಿ ನಿಯಮಿತವಾದುದರಿಂದ ಸೈಬರ್ಅಪರಾಧಗಳ ಸಂಖ್ಯೆ ಶೇ.500 ಹೆಚ್ಚಾಗಿದೆ. ಜನರು ಡಿಜಿಟಲ್ ಫ್ಲಾಟ್‌ಫಾರಂನ್ನು ನೆಚ್ಚಿಕೊಂಡ ಕಾರಣ ಹಣಕಾಸು ವಂಚನೆವಿಪರೀತ ಹೆಚ್ಚಾಗಿದೆ .

ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ವಿವಿಧ ತಪ್ಪು ಮಾಹಿತಿ, ನಕಲಿ ಸುದ್ದಿ ಇತ್ಯಾದಿಗಳ ಮೂಲಕ ವಂಚನೆ ನಡೆಯುತ್ತದೆ. ಸೈಬರ್‌ಲೋಕದಲ್ಲಿರುವ ಮಾಹಿತಿಭಂಡಾರವೇಇದ್ದು ಮಾಹಿತಿ ಕದಿಯುವುದರಿಂದ ನಮ್ಮ ನಾಗರಿಕರ ಗೌಪತ್ಯೆಗೆ ಧಕ್ಕೆಯಾಗುತ್ತದ. ಹಾಗಾಗಿ ಆನ್‌ಲೈನ್‌ನಲ್ಲಿರುವಾಗ ಮತ್ತು ಇಂಟರ್ನೆಟ್ ಬಳಸುವಾಗ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ

ಈ ರೀತಿಯ ಕಾರ್ಯಕ್ರಮ ಆಯೋಜಿಸಿದ ರಾಜ್ಯ ಸರ್ಕಾರ ಮತ್ತು ಕೇರಳ ಪೊಲೀಸರನ್ನು ಎನ್‌ಎಸ್‌ಎ ಶ್ಲಾಘಿಸಿದೆ.

ಸಮ್ಮೇಳನವನ್ನು ಉದ್ಘಾಟಿಸಿದ ಕೇರಳ ಗವರ್ನರ್ ಆರಿಫ್ ಮೊಹಮ್ಮದ್ ಖಾನ್, ಕೋವಿಡ್ -19ನಿಂದಾಗಿ ಜನರು ಅಂತರ್ಜಾಲವನ್ನು ಅವಲಂಬಿಸಿರುವುದರಿಂದ ನಾಗರಿಕರು ಆನ್‌ಲೈನ್‌ನಲ್ಲಿರುವಾಗ ಹೆಚ್ಚಿನ ಜಾಗರೂಕರಾಗಿರಬೇಕು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.