ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಎಸ್‌ ಆಯ್ಕೆ ನಿಯಮ ಬದಲು

Last Updated 7 ಜೂನ್ 2022, 19:30 IST
ಅಕ್ಷರ ಗಾತ್ರ

ನವದೆಹಲಿ: ರಕ್ಷಣಾ ಪಡೆಗಳ ಮುಖ್ಯಸ್ಥರ (ಸಿಡಿಎಸ್‌) ಹುದ್ದೆಗೆ 62 ವರ್ಷದೊಗಿನ ಸೇವಾ ನಿರತ ಅಥವಾ ನಿವೃತ್ತ ಲೆಫ್ಟಿನೆಂಟ್ ಜನರಲ್‌ಗಳು, ಏರ್‌ ಮಾರ್ಷಲ್‌ಗಳ, ವೈಸ್‌ ಅಡ್ಮಿರಲ್‌ ಗಳನ್ನು ಆಯ್ಕೆ ಮಾಡುವುದಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ನಿಯಮಗಳಿಗೆ ತಿದ್ದುಪಡಿ ತಂದಿದೆ.

ಸದ್ಯ ಇರುವ ನಿಯಮದಂತೆ ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದವರು ಮಾತ್ರ ಸಿಡಿಎಸ್‌ ಹುದ್ದೆಗೆ ಏರಲು ಸಾಧ್ಯವಿತ್ತು. ಇನ್ನು ಮುಂದೆ ಆಯ್ಕೆಯಲ್ಲಿ ಇನ್ನಷ್ಟ ವೈವಿಧ್ಯ ಸಾಧ್ಯವಾಗಲಿದೆ.

ಕಳೆದ ವರ್ಷ ಡಿಸೆಂಬರ್‌ 8ರಂದು ಹೆಲಿಕಾಪ್ಟರ್‌ ದುರಂತದಲ್ಲಿ ಬಿಪಿನ್ ರಾವತ್ ಅವರು ಮೃತಪಟ್ಟ ಬಳಿಕ ಸಿಡಿಎಸ್‌ ಹುದ್ದೆ ಖಾಲಿ ಉಳಿದಿತ್ತು. ಇದೀಗ ಸಿಡಿಎಸ್‌ ನೇಮಕಾತಿ ನಿಯಮದಲ್ಲಿ ಬದಲಾವಣೆ ತಂದಿರುವುದರಿಂದ ದೇಶದ ರಕ್ಷಣಾ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಅಧಿಕಾರಿಯನ್ನೇ ಸಿಡಿಎಸ್ ಆಗಿ ಆಯ್ಕೆ ಮಾಡಲು ಸರ್ಕಾರ ಮುಂದಾಗಲಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT