ಮುಂದಿನ ವಾರದಿಂದ 4 ವಿಶೇಷ ಪೀಠಗಳ ಕಾರ್ಯನಿರ್ವಹಣೆ: ಸಿಜೆಐ

ನವದೆಹಲಿ: ‘ಕ್ರಿಮಿನಲ್ ಪ್ರಕರಣ, ನೇರ ಮತ್ತು ಪರೋಕ್ಷ ತೆರಿಗೆ, ಭೂ ಸ್ವಾಧೀನ ಹಾಗೂ ಅಪಘಾತ ಪರಿಹಾರ ಸಂಬಂಧ ಸಲ್ಲಿಕೆಯಾಗುವ ಅರ್ಜಿಗಳ ವಿಚಾರಣೆಗಾಗಿ ನಾಲ್ಕು ವಿಶೇಷ ನ್ಯಾಯಪೀಠಗಳನ್ನು ರಚಿಸಲಾಗಿದ್ದು, ಇವು ಮುಂದಿನ ವಾರದಿಂದ ಕಾರ್ಯನಿರ್ವಹಿಸಲಿವೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಬುಧವಾರ ತಿಳಿಸಿದ್ದಾರೆ.
ಈ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ತುರ್ತು ವಿಚಾರಣೆ ಪಟ್ಟಿಗೆ ಸೇರಿಸುವ ಸಲುವಾಗಿ ವಕೀಲರು ಕೋರ್ಟ್ ನಂ 4ರ ಬಳಿ ಸರತಿ ಸಾಲಿನಲ್ಲಿ ನಿಂತಿದ್ದರು. ಇದನ್ನು ಗಮನಿಸಿದ ಅವರು ನಾಲ್ಕು ವಿಶೇಷ ನ್ಯಾಯಪೀಠಗಳನ್ನು ರಚಿಸುತ್ತಿರುವುದಾಗಿ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.