ಸ್ನೇಹವನ್ನೇ ಲೈಂಗಿಕ ಸಂಬಂಧಕ್ಕೆ ಒಪ್ಪಿಗೆ ಎಂದು ಭಾವಿಸುವಂತಿಲ್ಲ: ಬಾಂಬೆ ಹೈಕೋರ್ಟ್

ಮುಂಬೈ: ಯುವತಿ ಸ್ನೇಹಭಾವದಿಂದ ಇದ್ದಾಳೆ ಎಂಬ ಕಾರಣಕ್ಕೆ ಲೈಂಗಿಕ ಸಂಬಂಧಕ್ಕೆ ಆಕೆಯ ಒಪ್ಪಿಗೆ ಇದೆ ಎಂದು ಅರ್ಥೈಸುವಂತಿಲ್ಲ ಎಂದು ಅಭಿಪ್ರಾಯಪಟ್ಟಿರುವ ಬಾಂಬೆ ಹೈಕೋರ್ಟ್, ಮುದುವೆಯಾಗುವ ಉದ್ದೇಶದಿಂದ ಗರ್ಭಿಣಿ ಮಾಡಿದ ಆರೋಪಿಯ ನೀರಿಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಯುವತಿಯನ್ನು ಮದುವೆಯಾಗುವುದಾಗಿ ಹೇಳಿ ಅತ್ಯಾಚಾರವೆಸಗಿ, ನಗರದ ನಿವಾಸಿ ಆಶಿಷ್ ಚಾಕೊರ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಭಾರತಿ ಡಾಂಗ್ರೆ ಅವರಿದ್ದ ಏಕ ಸದಸ್ಯ ಪೀಠ, ಈ ಸಂಬಂಧ ಇದೇ 24ರಂದು ಆದೇಶ ಹೊರಡಿಸಿದೆ.
‘ಸ್ನೇಹದಿಂದ ಇರುವುದನ್ನೇ ನೆಪವಾಗಿಟ್ಟುಕೊಂಡು ಲೈಂಗಿಕ ಸಂಬಂಧಕ್ಕೆ ಆಕೆಯ ಒಪ್ಪಿಗೆ ಇದೆ ಎಂದು ತಾನೇ ಅಂದುಕೊಳ್ಳುವಂತಿಲ್ಲ. ಆರೋಪಿ ವಿರುದ್ಧದ ದೂರಿನ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸಬೇಕು’ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ಸಂತ್ರಸ್ತೆ ದೂರಿನ ಪ್ರಕಾರ, ‘ ಚಾಕೊರ್ ಜತೆ ಸ್ನೇಹದಿಂದ ಇದ್ದೆ. ಆದರೆ ಆತ ಮದುವೆಯಾಗುವ ಭರವಸೆ ನೀಡಿ ಲೈಂಗಿಕ ಸಂಬಂಧಕ್ಕೆ ಒತ್ತಾಯಿಸಿದ. ಗರ್ಭಿಣಿಯಾಗುತ್ತಿದ್ದಂತೆ ಮದುವೆಯಾಗಲು ನಿರಾಕರಿಸಿದ. ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಲೈಂಗಿಕ ಸಂಬಂಧಕ್ಕೆ ನನ್ನ ಒಪ್ಪಿಗೆ ಇತ್ತು ಎಂದು ಹೇಳಿದ್ದಾನೆ ’ ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.