ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮಾಡಿದ ತಪ್ಪಿಗೆ ದೇಶ ಏಕೆ ಬೆಲೆ ತೆರಬೇಕು?: ರಾಹುಲ್‌ ಗಾಂಧಿ

Last Updated 23 ನವೆಂಬರ್ 2021, 14:27 IST
ಅಕ್ಷರ ಗಾತ್ರ

ನವದೆಹಲಿ: ‘ಜನಸಾಮಾನ್ಯರು ಎದುರಿಸುತ್ತಿರುವ ಬೆಲೆ ಏರಿಕೆಯಂಥ ನೈಜ ಸಮಸ್ಯೆಗಳಿಂದ ದೇಶದ ಗಮನವನ್ನು ಜಾತಿ ಮತ್ತು ಧರ್ಮಗಳಂಥ ಸಮಸ್ಯೆಗಳತ್ತ ತಿರುಗಿಸಲು ಬಿಜೆಪಿ ಸರ್ಕಾರವು ಯತ್ನಿಸುತ್ತಿದೆ’ ಎಂದು ಮಂಗಳವಾರ ಕಾಂಗ್ರೆಸ್ ಆರೋಪಿಸಿದೆ.

ಕೆಲವು ಸರಕುಗಳ ಮೇಲಿನ ಜಿಎಸ್‌ಟಿ ಹೆಚ್ಚಳವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ‘ಬಿಜೆಪಿ ಸರ್ಕಾರದ ಚುನಾವಣಾ ಘೋಷಣೆಯಾಗಿರುವ ‘ಅಚ್ಛೇ ದಿನ್’ ವಾಸ್ತವವನ್ನು ನಿರಂತರವಾಗಿ ‘ಬಹಿರಂಗಪಡಿಸುತ್ತಿದೆ’ ಎಂದು ಹೇಳಿದ್ದಾರೆ.

‘ನಿತ್ಯಬಳಕೆಯ ವಸ್ತುಗಳ ಬೆಲೆಯು ಗಗನಕ್ಕೇರಿದ್ದು, ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ದೂರಿದ್ದಾರೆ.

‘ಅಡುಗೆ ಮನೆಯಲ್ಲಿ ಸೆಕ್ಷನ್ 144 ಇದ್ದಂತೆ ಕಾಣುತ್ತದೆ. ನೀವು ಅಲ್ಲಿ ನಾಲ್ಕಕ್ಕಿಂತ ಹೆಚ್ಚಿಗೆ ಟೊಮೆಟೊ ಅಥವಾ ಈರುಳ್ಳಿಯನ್ನು ಇರಿಸಿಕೊಳ್ಳುವಂತಿಲ್ಲ’ ಎಂದು ಟೀಕಿಸಿದ ಅವರು, ‘ಸರ್ಕಾರವು ಬೆಲೆಏರಿಕೆಯಂಥ ಸಮಸ್ಯೆಗಳತ್ತ ಗಮನ ಸೆಳೆಯುವ ಬದಲು ಏಕೆ ಜನಸಾಮಾನ್ಯರಿಗೆ ಸಂಬಂಧಪಡದ ವಿಷಯಗಳತ್ತ ಗಮನ ಸೆಳೆಯಲು ಯತ್ನಿಸುತ್ತಿದೆ’ ಎಂದು ಪ್ರಶ್ನಿಸಿದರು.

‘ತಮ್ಮ ವೈಫಲ್ಯಗಳನ್ನು ಮರೆಮಾಚುವ ಮೂಲಕ ಈ ಸರ್ಕಾರವು ದೇಶದ ಸಾಮೂಹಿಕ ಗಮನವನ್ನು ಹೈಜಾಕ್ ಮಾಡಲು ನಾವು ಬಿಡುವುದಿಲ್ಲ. ಪ್ರಧಾನಿ ಮಾಡಿದ ತಪ್ಪಿಗೆ ದೇಶ ಬೆಲೆ ತೆರೆಯುವಂತಾಗಿದೆ’ ಎಂದೂ ಅವರು ಸುದ್ದಿಗಾರರಿಗೆ ತಿಳಿಸಿದರು.

‘ಏಳೂವರೆ ವರ್ಷಗಳ ದೀರ್ಘಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರಪಳಿಯೋಪಾದಿಯಲ್ಲಿ ತಪ್ಪುಗಳನ್ನು ಮಾಡಿದ್ದಾರೆ. ಇವುಗಳಲ್ಲಿ ಕೆಲವನ್ನು ಒಪ್ಪಿಕೊಂಡಿದ್ದಾರೆ, ಮತ್ತೆ ಕೆಲವನ್ನು ಒಪ್ಪಿಕೊಂಡಿಲ್ಲ. ಮೋದಿ ಮಾಡಿದ ತಪ್ಪಿಗೆ ದೇಶ ಏಕೆ ಬೆಲೆ ತೆರಬೇಕು’ ಎಂದು ಅವರು ಪ್ರಶ್ನಿಸಿದರು.

‘ಇತ್ತೀಚಿನ ಉಪಚುನಾವಣೆಗಳ ಫಲಿತಾಂಶದ ನಂತರ ಕೇಂದ್ರ ಸರ್ಕಾರವು ತನ್ನ ಕೆಲವು ತಪ್ಪುಗಳನ್ನು ಅರಿತುಕೊಂಡಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರವು ತನ್ನ ಮತ್ತಷ್ಟು ತಪ್ಪುಗಳನ್ನು ಅರಿತುಕೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT