ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದಲ್ಲಿ ಸಮನ್ವಯ ಸಮಿತಿ ರಚನೆ ಸಾಧ್ಯತೆ

Last Updated 13 ಆಗಸ್ಟ್ 2022, 13:20 IST
ಅಕ್ಷರ ಗಾತ್ರ

ಪಟ್ನಾ:ಬಿಜೆಪಿ ನೇತೃತ್ವದ ಎನ್‌ಡಿಎಯಲ್ಲಿದ್ದಾಗ ಜೆಡಿಯು ಒತ್ತಾಯಿಸುತ್ತಿದ್ದ ಸಮನ್ವಯ ಸಮಿತಿಯನ್ನು, ಬಿಹಾರದಲ್ಲಿ ಸದ್ಯದ ‘ಮಹಾಘಟಬಂಧನ್’ (ಮಹಾಮೈತ್ರಿಕೂಟ) ಸುಗಮವಾಗಿ ಕಾರ್ಯನಿರ್ವಹಿಸಲುಮುಖ್ಯಮಂತ್ರಿ ನಿತೀಶ್ ಕುಮಾರ್ ರಚಿಸುವ ಸಾಧ್ಯತೆ ಇದೆ.

ಮಹಾಮೈತ್ರಿಕೂಟದ ಸಿಪಿಐ (ಎಂಎಲ್) ಶಾಸಕರು ಶುಕ್ರವಾರ ಸಂಜೆ ಮುಖ್ಯಮಂತ್ರಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಈ ಸೂಚನೆ ದೊರೆತಿದೆ.

‘ಮುಖ್ಯಮಂತ್ರಿ ಸಮನ್ವಯ ಸಮಿತಿ ಪರವಾಗಿದ್ದಾರೆ. ನಮಗೂ ಹಾಗೆಯೇ ಅನಿಸಿತು. ಯಾವುದೇ ಮಿತ್ರ ಪಕ್ಷ ಆಕ್ಷೇಪಣೆ ಹೊಂದಿಲ್ಲ. ಆದ್ದರಿಂದ, ಸರಿಯಾದ ಸಮಯದಲ್ಲಿ ನಿರ್ಧಾರ ಬರಬಹುದು’ ಎಂದು ಸಿಪಿಐ (ಎಂಎಲ್) ಶಾಸಕ ಸಂದೀಪ್ ಸೌರವ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪ್ರಸ್ತುತ ಮಹಾಮೈತ್ರಿಕೂಟ ಏಳು ಪಕ್ಷಗಳನ್ನು ಒಳಗೊಂಡಿದೆ. ಜೆಡಿ (ಯು), ಆರ್‌ಜೆಡಿ, ಕಾಂಗ್ರೆಸ್, ಸಿಪಿಐ (ಎಂಎಲ್), ಸಿಪಿಐ, ಸಿಪಿಎಂ ಮತ್ತು ಎಚ್‌ಎಎಂ. 243 ಬಲದ ವಿಧಾನಸಭೆಯಲ್ಲಿ 160 ಕ್ಕೂ ಹೆಚ್ಚು ಶಾಸಕರನ್ನು ಈ ಮೈತ್ರಿಕೂಟ ಹೊಂದಿದೆ.

ಸಿಪಿಐ(ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಕೂಡ ಸಮನ್ವಯ ಸಮಿತಿ ರಚನೆಗೆ ಆಗ್ರಹಿಸಿದ್ದರು.

ಈ ನಿಟ್ಟಿನಲ್ಲಿ ಸಂಪುಟ ವಿಸ್ತರಣೆಯ ನಂತರಮುಖ್ಯಮಂತ್ರಿ ಮುಂದಿನ ವಾರ ನವದೆಹಲಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖ ವಿರೋಧ ಪಕ್ಷದ ನಾಯಕರನ್ನು ಕುಮಾರ್‌ ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಅವರ ನಿಕಟ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT