ಶನಿವಾರ, ಅಕ್ಟೋಬರ್ 24, 2020
27 °C

ಗ್ರೇಟ್‌ ಗೋಲ್ಡನ್‌ ಸರ್ಕಸ್‌ಗೆ ಶೋಕಾಸ್ ನೋಟಿಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಾಣಿಗಳ ನಿರ್ವಹಣೆ ಮತ್ತು ಪ್ರದರ್ಶನ ವಿಷಯದಲ್ಲಿ ವನ್ಯಜೀವಿ ರಕ್ಷಣೆ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ ಗುಜರಾತ್‌ನ ಗ್ರೇಟ್‌ ಗೋಲ್ಡನ್‌ ಸರ್ಕಸ್‌ ಕಂಪನಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿರುವು ದಾಗಿ ಕೇಂದ್ರ ಪ್ರಾಣಿಸಂಗ್ರಹಾಲಯ ಪ್ರಾಧಿಕಾರ (ಸಿಝೆಡ್‌ಎ) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಗ್ರೇಟ್‌ ಗೋಲ್ಡನ್‌ ಸರ್ಕಸ್‌, ವನ್ಯಜೀವಿ ರಕ್ಷಣೆ ಕಾಯ್ದೆಯಡಿ ಗುರುತಿಸಿಕೊಂಡಿರುವ ದೇಶದ ಏಕೈಕ ಸರ್ಕಸ್‌ ಕಂಪನಿಯಾಗಿದೆ. ಆದರೂ, ಪ್ರಾಣಿಗಳ ನಿರ್ವಹಣೆ ಮತ್ತು ಪ್ರದರ್ಶನದಲ್ಲಿ ಕಾಯ್ದೆ ನಿಯಮ ಉಲ್ಲಂಘಿಸಿರುವ ಆರೋಪದ ಕಾರಣ, ಈ ಕಂಪನಿಗೆ ನೀಡಿರುವ ಮಾನ್ಯತೆಯನ್ನು ಏಕೆ ರದ್ದುಗೊಳಿಸಬಾರದು ಎಂದು ಸರ್ಕಸ್ ಕಂಪನಿಗೆ ನೋಟಿಸ್‌ ಕಳುಹಿಸಿರುವುದಾಗಿ ಪ್ರಾಧಿಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಮತ್ತು ಫೆಡರೇಶನ್ ಆಫ್ ಇಂಡಿಯನ್ ಅನಿಮಲ್ಸ್ ಪ್ರೊಟೆಕ್ಷನ್ ಆರ್ಗನೈಸೇಶನ್ (ಎಫ್‌ಐಎಪಿಒ) ಸಂಸ್ಥೆಗಳು ಸಂಸ್ಥೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರಜನೀಶ್ ಭಟ್ನಾಗರ್ ಅವರ ನ್ಯಾಯಪೀಠದ ಮುಂದೆ ಪ್ರಾಧಿಕಾರ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಮಾಹಿತಿ ಇದೆ.

‘ಕೋವಿಡ್‌19 ನಿಂದಾಗಿ ಸ್ಥಗಿತಗೊಂಡಿರುವ ಸರ್ಕಸ್‌ ಕಂಪನಿಗಳು, ಹಸಿವಿನಿಂದ ಬಳಲುತ್ತಿರುವ ಪ್ರಾಣಿಗಳಿಗೆ ಆಹಾರ ನೀಡುವುದಕ್ಕೂ ಕಷ್ಟಪಡುತ್ತಿವೆ‘ ಎಂದು ಪೆಟಾ ಇಂಡಿಯಾ ಪರ ವಕೀಲರಾದ ಅಮನ್ ಹಿಂಗೊರಾನಿ ಮತ್ತು ಸ್ವಾತಿ ಸುಂಬಿ ವಾದ ಮಂಡಿಸಿದ್ದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು